Sunday, June 7, 2026
Homeಇತರಬೆಳ್ತಂಗಡಿ: ತಾಯಿಯ ಆರೈಕೆಗೆಂದು ಮನೆಯಲ್ಲಿಯೇ ಇದ್ದ ಯುವತಿ ನಾಪತ್ತೆ...!

ಬೆಳ್ತಂಗಡಿ: ತಾಯಿಯ ಆರೈಕೆಗೆಂದು ಮನೆಯಲ್ಲಿಯೇ ಇದ್ದ ಯುವತಿ ನಾಪತ್ತೆ…!

- Advertisement -
- Advertisement -

ಬೆಳ್ತಂಗಡಿ: ಲಾಯಿಲ ಗ್ರಾಮದ 21 ವರ್ಷದ ಯುವತಿ ನಾಪತ್ತೆಯಾಗಿದ್ದು ಈ ಬಗ್ಗೆ, ಆಕೆಯ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ.

ರೇಣುಕಾ ಕಳೆದ ಒಂದು ವರ್ಷದಿಂದ ಬೆಳ್ತಂಗಡಿಯ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ತಾಯಿಯ ಆರೈಕೆಗೆಂದು ಮನೆಯಲ್ಲಿಯೇ ಇದ್ದರು.

ಇನ್ನು ಅ.25ರಂದು ಅವರು ನಾಪತ್ತೆಯಾಗಿದ್ದಾರೆ. ಆಕೆಯ ಮೊಬೈಲ್ ಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನಲೆಯಲ್ಲಿ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!