Wednesday, June 3, 2026
Homeಕರಾವಳಿಮಂಗಳೂರು; ನನ್ನ ಜೊತೆ ಸಹಕರಿಸು ಇಲ್ಲದಿದ್ದರೆ 24 ಪೀಸ್ ಗಳನ್ನಾಗಿ ಮಾಡುತ್ತೇನೆ ಎಂದು ಯುವತಿಗೆ ಬೆದರಿಕೆ...

ಮಂಗಳೂರು; ನನ್ನ ಜೊತೆ ಸಹಕರಿಸು ಇಲ್ಲದಿದ್ದರೆ 24 ಪೀಸ್ ಗಳನ್ನಾಗಿ ಮಾಡುತ್ತೇನೆ ಎಂದು ಯುವತಿಗೆ ಬೆದರಿಕೆ ಹಾಕಿದ ಯುವಕ ಅರೆಸ್ಟ್

- Advertisement -
- Advertisement -

ಮಂಗಳೂರು; ನನ್ನ ಜೊತೆ ಸಹಕರಿಸು ಇಲ್ಲದಿದ್ದರೆ 24 ಪೀಸ್ ಗಳನ್ನಾಗಿ ಮಾಡುತ್ತೇನೆ ಎಂದು ಯುವತಿಗೆ ಬೆದರಿಕೆ ಹಾಕಿದ ಯುವಕನನ್ನು ಅರೆಸ್ಟ್ ಮಾಡಿರುವ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ. ಶಾರೀಕ್  ಬಂಧಿತ ಆರೋಪಿ.

ಆರೋಪಿ ಇಡ್ಯಾ ಪರಿಸರದ ಯುವತಿಯೊಬ್ಬಳ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಆಕೆಯ ಅಣ್ಣನಿಗೆ ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಅಂತ ಬೆದರಿಕೆ ಸಂದೇಶ ಕಳುಹಿಸಿದ್ದ. ಈ ಹಿನ್ನಲೆ ಯುವತಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಳು. ಅದರಂತೆ ತನಿಖೆ ನಡೆಸಿದ ಪೊಲೀಸರು ಶಾರಿಕ್ ನನ್ನು ಬಂಧಿಸಿದ್ದಾರೆ.


ದಿನಾಂಕ 24-10-2024 ರಂದು, ಯುವತಿಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಇದರಿಂದಾಗಿ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಅಲ್ಲದೇ, ಶಾರೀಕ್ ಮತ್ತು ಅವರ ತಾಯಿ ನೂರ್ ಜಹಾನ್ ರವರ ಕಿರುಕುಳದಿಂದ ಆತ್ಮಹತ್ಯೆಗೆ ತೀರ್ಮಾನಿಸಿರುವುದಾಗಿ ಪತ್ರ ಬರೆದು, 25-10-2024ರ ಮುಂಜಾನೆ  ಆತ್ಮಹತ್ಯೆಗೆ ಯತ್ನಿಸಿದ್ದಳು. ಅವರನ್ನು ತಕ್ಷಣವೇ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

ಈ ಘಟನೆಯ ನಂತರ, ಯುವತಿ ನೀಡಿದ ಪ್ರಕಾರ, ಶಾರೀಕ್ ಅವರ ನಿರಂತರ ಕಿರುಕುಳದಿಂದ ತಾನು ಭೀತಿಯಾಗಿದ್ದೇನೆ ಎಂದು ತಿಳಿಸಿದ್ದಾಳೆ. ಇದರ ಆಧಾರದಲ್ಲಿ, ಸುರತ್ಕಲ್ ಪೊಲೀಸ್ ಪೊಲೀಸರು ಶಾರೀಕನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!