Saturday, June 27, 2026
Homeಕರಾವಳಿಉಡುಪಿಕುಂದಾಪುರ: ಮನೆಯಿಂದ ಹೊರಟ ಯುವಕ ನಾಪತ್ತೆ

ಕುಂದಾಪುರ: ಮನೆಯಿಂದ ಹೊರಟ ಯುವಕ ನಾಪತ್ತೆ

- Advertisement -
- Advertisement -

ಕುಂದಾಪುರ: ಮನೆಯಿಂದ ಹೊರಟ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದಲ್ಲಿ ನಡೆದಿದೆ.

ಸುಜನ್(‌೨೯) ನಾಪತ್ತೆಯಾದ ಯುವಕ. ಈತ ತಂದೆ ನಡೆಸುತ್ತಿದ್ದ ಹೋಳಿಗೆ ತಯಾರಿಕಾ ಘಟಕದಲ್ಲಿ ತಂದೆಯೊಂದಿಗೆ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿ ಮನೆಗೆ ಹೋಗುವುದಾಗಿ ಹೇಳಿದ ಯುವಕ ಮನೆಯಿಂದ ಹೊರಟು ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ. ಯುವಕ ನಾಪತ್ತೆಯಾಗಿರುವ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!