Monday, June 8, 2026
Homeಇತರಮಂಗಳೂರು: ಮೀನುಗಾರಿಕೆಗಾಗಿ ತೆರಳಿದ್ದ ಯುವಕನೊಬ್ಬ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆ...!

ಮಂಗಳೂರು: ಮೀನುಗಾರಿಕೆಗಾಗಿ ತೆರಳಿದ್ದ ಯುವಕನೊಬ್ಬ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆ…!

- Advertisement -
- Advertisement -

ಮಂಗಳೂರು: ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗಾಗಿ ಬೋಟ್ ನಲ್ಲಿ ತೆರಳಿದ ಯುವಕನೊಬ್ಬ ಬೋಟ್’ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ಮೀನುಗಾರನನ್ನು ತಮಿಳುನಾಡು ಮೂಲದ ವೆಲ್ ಮುರುಗನ್ (24) ಎಂದು ಗುರುತಿಸಲಾಗಿದೆ.

ಅಲ್ ಕೌಸರ್ ಎಂಬ ಬೋಟ್‌ ನಲ್ಲಿ ಅ. 24 ರಂದು ರಾತ್ರಿ 10:30 ಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಒಟ್ಟು 10 ಮಂದಿ ಮೀನುಗಾರರು ತೆರಳಿದ್ದರು. ಈ ವೇಳೆ ರಾತ್ರಿ 11:15 ರ ವೇಳೆಗೆ ಅದರಲ್ಲಿದ್ದ ವೆಲ್ ಮುರುಗನ್ ಕಾಣಿಸದಾದಗ ಟಾರ್ಚ್ ಹಾಕಿ ಸಮೀಪದ ಪ್ರದೇಶದಲ್ಲಿ ವ್ಯಾಪಕ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ.

ಬೋಟು ಸಮುದ್ರದಲ್ಲಿ ಮುಂದಕ್ಕೆ ಸಾಗುತ್ತಿದ್ದಾಗ ಅಲೆಗಳ ಅಬ್ಬರದಿಂದ ವೆಲ್ ಮುರುಗನ್ ಅವರು ಬೋಟ್‌ನಿಂದ ಸಮುದ್ರದಕ್ಕೆ ಬಿದ್ದಿರಬಹುದು ಎಂದು ಸಂಶಯಿಸಲಾಗಿದೆ ಶಂಕಿಸಲಾಗಿದೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!