Friday, June 5, 2026
Homeಕರಾವಳಿಪಂಜದ ಯುವಕನೋರ್ವ ಜಾಂಡೀಸ್ ಗೆ ಬಲಿ

ಪಂಜದ ಯುವಕನೋರ್ವ ಜಾಂಡೀಸ್ ಗೆ ಬಲಿ

- Advertisement -
- Advertisement -

ಪಂಜ: ಯುವಕನೊಬ್ಬ ಜಾಂಡೀಸ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕರಿಯಾಗದೆ ಮೃತಪಟ್ಟ ಘಟನೆ ಪಂಜದಲ್ಲಿ ನಡೆದಿದೆ.

ಮೃತಪಟ್ಟವರು ಕೂತ್ಕುಂಜ ಗ್ರಾಮದ ಕಲ್ಕ ದಿ.ಪದ್ಮಯ್ಯ ಗೌಡ ಮತ್ತು ಶ್ರೀಮತಿ ಇಂದಿರಾ ದಂಪತಿಗಳ ಪುತ್ರ ಪ್ರಶಾಂತ್ (39).

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಶಾಂತ್ ಅವರು ಕೆಲ ಸಮಯಗಳ ಹಿಂದೆ ಮನೆಗೆ ಬಂದಿದ್ದು, ಜಾಂಡಿಸ್ ಗೆ ಒಳಗಾದರಿಂದ ಮನೆಯಲ್ಲಿದ್ದುಕೊಂಡೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಏಕಾಏಕಿ ಅನಾರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!