Tuesday, September 10, 2024
Homeಕರಾವಳಿಗ್ಯಾರೇಜ್ ನಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ

ಗ್ಯಾರೇಜ್ ನಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ

spot_img
- Advertisement -
- Advertisement -

ಉಳ್ಳಾಲ: ಮುಡಿಪು ಸಮೀಪದ ಕಾರಿನ ಗ್ಯಾರೇಜ್ ನಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡವರು ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25). ಅವರು  ಕಂಕನಾಡಿಯ ಕಾಂಚನ ಷೋರೂಮಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 

ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿದ್ದಾರೆ. ನ.20 ರಂದು ಕೆಲಸಕ್ಕೆ ಹೋದವರು ತಡರಾತ್ರಿಯಾದರೂ ಮನೆಗೆ ವಾಪಸ್ಸಾಗದೇ ಇರುವುದನ್ನು ಗಮನಿಸಿ ಮನೆಯ ಸುತ್ತ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಬಳಿಕ ನಿತ್ಯ ಕಿಶೋರ್ ಕೆಲಸದಿಂದ ವಾಪಸ್ಸಾಗಿ ಕುಳಿತುಕೊಳ್ಳುವ ಗ್ಯಾರೇಜ್ ಸಮೀಪ ಹುಡುಕಾಡಿದಾಗ ಬೈಕ್ ಪತ್ತೆಯಾಗಿದ್ದು, ಒಳಗೆ ಗಮನಿದಾಗ ನೇಣುಹಾಕಿರುವುದು ಗಮನಕ್ಕೆ ಬಂದಿದೆ. 

ಕಿಶೋರ್ ಕೆಲಸ ಮಾಡುತ್ತಿದ್ದ ಷೋ ರೂಮಿನ ಸೂಪರ್ ವೈಸರ್ ಆರು ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಆಪ್ತಸ್ನೇಹಿತರಾಗಿದ್ದ ಕಿಶೋರ್ ಇದೇ ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!