Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಸೌದಿಯಲ್ಲಿ ರಸ್ತೆ ಅಪಘಾತದಲ್ಲಿ ಉಳ್ಳಾಲ ಮೂಲದ ಮಹಿಳೆ ಹಾಗೂ ಮಗು ಸಾವು

ಮಂಗಳೂರು; ಸೌದಿಯಲ್ಲಿ ರಸ್ತೆ ಅಪಘಾತದಲ್ಲಿ ಉಳ್ಳಾಲ ಮೂಲದ ಮಹಿಳೆ ಹಾಗೂ ಮಗು ಸಾವು

- Advertisement -
- Advertisement -

ಮಂಗಳೂರು; ರಸ್ತೆ ಅಪಘಾತದಲ್ಲಿ ಉಳ್ಳಾಲ ಮೂಲದ ಮಹಿಳೆ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದ ದಮಾಮ್ ಬಳಿ  ನಡೆದಿದೆ.

ಹೈದರ್ ಉಳ್ಳಾಲ್ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಎರಡೂವರೆ ವರ್ಷದ ಅವರ ಮೊಮ್ಮಗ ಮೃತರು ದುರ್ದೈವಿಗಳು.

ಶುಕ್ರವಾರ ಸಂಜೆ ವೇಳೆ ಮದೀನಾದಿಂದ ಕಾರಿನಲ್ಲಿ ಸಫಾ ಫಾತಿಮಾ(30) ತನ್ನ ಪತಿ ಮಲಪುರಂ ಆರಿಕೋಡ್‌ನ ಸುಹೈಲ್ (35) ಮತ್ತು ಸಹೋದರ ಮುಹವಿಯ(23) ಎಂಬವರು ದಮಾಮ್ ನಲ್ಲಿರುವ ಹೈದರ್ ಉಳ್ಳಾಲ್ ಅವರ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರು ಅಪಘಾತವಾಗಿದೆ.

ಕಾರಿನಲ್ಲಿದ್ದ ಸುಹೈಲ್, ಮಕ್ಕಳಾದ ಅಬ್ದುಲ್ ಮಲಿಕ್ (7), ಅಬ್ದುಲ್ ರಹಿಮಾನ್ (6) ಹಾಗೂ ಅಹ್ಮದ್ (5) ಗಾಯಗೊಂಡಿದ್ದಾರೆ.

- Advertisement -

Latest News

error: Content is protected !!