Thursday, April 25, 2024
Homeತಾಜಾ ಸುದ್ದಿಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿ, ಪತ್ನಿಯಿಂದಾಗಿ ತಗ್ಲಾಕ್ಕೊಂಡ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿ, ಪತ್ನಿಯಿಂದಾಗಿ ತಗ್ಲಾಕ್ಕೊಂಡ

spot_img
- Advertisement -
- Advertisement -

ಬೆಂಗಳೂರು; ಯಾರಿದಾದ್ರೂ ತಪ್ಪಿಸಿಕೊಳ್ಳಬಹುದು ಆದ್ರೆ ಪತ್ನಿಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯಾನೇ ಇಲ್ಲ ಅನ್ನೋ ಮಾತಿದೆ. ಈತನ ಕಥೆ ನೋಡಿದ್ರೆ ಆ ಮಾತು ಪಕ್ಕಾ ಅನ್ಸುತ್ತೆ. ಪೊಲೀಸರಿಗೆ ತಲೆನೋವಾಗಿದ್ದ ಕಳ್ಳನೊಬ್ಬನಿಗೆ ಪತ್ನಿಯ ಜತೆ ಜಗಳವಾಡಿದ್ದೇ ದೊಡ್ಡ ಮುಳುವಾಗಿ ಹೋಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಕಳ್ಳ ಆಸೀಫ್ ಎಂಬಾತ​, ಪತ್ನಿಯ ಜತೆ ಜಗಳವಾಡಿರುವ ಕಾರಣದಿಂದ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅಷ್ಟಕ್ಕೂ ಆಗಿದ್ದೇನು ಗೊತ್ತಾ.. ಆಸೀಫ್​ ತನ್ನ ಪತ್ನಿ ಜತೆ ಜಗಳವಾಡಿಕೊಂಡು ಮನೆಯಿಂದ ದೂರವಾಗಿದ್ದ. ಈತನಿಗೊಬ್ಬ ಮಗಳಿದ್ದು, ಆಕೆ ಶಾಲೆಯಲ್ಲಿ ಓದುತ್ತಿದ್ದಾಳೆ. ಮಗಳನ್ನು ಪತ್ನಿ ತೋರಿಸುತ್ತಿರಲಿಲ್ಲ. ಈ ಕಾರಣದಿಂದ ಈತ ಮಗಳನ್ನು ನೋಡಲು ಆಕೆ ಓದುತ್ತಿರುವ ಶಾಲೆಗೆ ಹೋಗುತ್ತಿದ್ದ. ಅಲ್ಲಿ ಮಗಳನ್ನು ಗುಟ್ಟಾಗಿ ಭೇಟಿಯಾಗಿ ಬರುತ್ತಿದ್ದ.

ಈ ವಿಷಯ ಪೊಲೀಸರಿಗೆ ತಿಳಿದಿದೆ. ಆತ ಬರುವುದನ್ನೇ ಕಾದು ಮಗಳ ಶಾಲಾ ವಾಹನದಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

- Advertisement -
spot_img

Latest News

error: Content is protected !!