Wednesday, June 24, 2026
Homeಪ್ರಮುಖ-ಸುದ್ದಿದೇಗುಲಕ್ಕೆ ಕಳ್ಳತನಕ್ಕೆಂದು ಬಂದು ಕಳ್ಳತನ ಮಾಡದೇ ದೇವರಿಗೆ ಕೈ ಮುಗಿದು ಹೋದ ಕಳ್ಳ

ದೇಗುಲಕ್ಕೆ ಕಳ್ಳತನಕ್ಕೆಂದು ಬಂದು ಕಳ್ಳತನ ಮಾಡದೇ ದೇವರಿಗೆ ಕೈ ಮುಗಿದು ಹೋದ ಕಳ್ಳ

- Advertisement -
- Advertisement -

ಮಂಡ್ಯ; ದೇಗುಲಕ್ಕೆ ಕಳ್ಳತನಕ್ಕೆಂದು ಬಂದು ಕಳ್ಳ ಕಳ್ಳತನ ಮಾಡದೇ ದೇವರಿಗೆ ಕೈ ಮುಗಿದು ಹೋದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದಲ್ಲಿ ನಡೆದಿದೆ.

ಮುಸುಕುಧಾರಿ ಕಳ್ಳನೊಬ್ಬ ಕದಲೂರು ಗ್ರಾಮದ ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ಗುರುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ದೇವಾಲಯದ ಸುತ್ತ ಗಮನಿಸಿದ್ದಾನೆ. ಆದರೆ, ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ತೆರಳಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪ್ರಕರಣ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

Latest News

error: Content is protected !!