Thursday, June 4, 2026
Homeಕರಾವಳಿಕಡಬ: ಮಲಗಿದಲ್ಲಿಯೇ ಮೃತಪಟ್ಟ ನಿವೃತ್ತ ಸೈನಿಕ !

ಕಡಬ: ಮಲಗಿದಲ್ಲಿಯೇ ಮೃತಪಟ್ಟ ನಿವೃತ್ತ ಸೈನಿಕ !

- Advertisement -
- Advertisement -

ಕಡಬ: ನಿವೃತ್ತ ಸೈನಿಕರೋರ್ವರು ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ಮನೆಯಲ್ಲಿ ಮಲಗಿದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಇವರು ಮೂಲತಃ ನೂಜಿಬಾಳ್ತಿಲ ಕನ್ವರೆ ಸಮೀಪದ ವೇಳಿಕಲ್ ನಿವಾಸಿ.

ಮೃತಪಟ್ಟ ಯೋಧ ನಿವೃತ್ತ ಸೈನಿಕ ಯೋಹಾನ್ (50) ಎಂದು ತಿಳಿದುಬಂದಿದೆ. ಮನೆಯಲ್ಲಿ ಒಬ್ಬರೇ ಜೀವನ ಸಾಗಿಸುತ್ತಿದ್ದರು. ಇವರು ಮನೆಯ ಎದುರಿನ ಲೈಟ್ ಹಾಕಿತ್ತು. ಹಗಲು ವೇಳೆಯೂ ಲೈಟ್ ಉರಿಯುತ್ತಿದ್ದದಲ್ಲದೆ ಚಿಲಕ ಹಾಕಿದ್ದರಿಂದ ಸ್ಥಳೀಯರಿಗೆ ಸಂಶಯಗೊಂಡು ಬಾಗಿಲು ತೆರೆದು ನೋಡಿದಾಗ ಮೃತಪಟ್ಟಿರುವುದು ದೃಡಪಟ್ಟಿದೆ.

ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯೋಧನ ಸಂಬಂಧಿಕರು ಕೂಡ ಆಗಮಿಸಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!