Monday, June 8, 2026
Homeತಾಜಾ ಸುದ್ದಿತಮಿಳುನಾಡಿನ ರೆಸ್ಟೋರೆಂಟ್ ಒಂದರಲ್ಲಿ ಕೊರೊನಾ ಜಾಗೃತಿ ಮೂಡಿಸಲು ಪರೋಟದಲ್ಲೇ ಸಿದ್ಧವಾಯ್ತು ಮಾಸ್ಕ್..

ತಮಿಳುನಾಡಿನ ರೆಸ್ಟೋರೆಂಟ್ ಒಂದರಲ್ಲಿ ಕೊರೊನಾ ಜಾಗೃತಿ ಮೂಡಿಸಲು ಪರೋಟದಲ್ಲೇ ಸಿದ್ಧವಾಯ್ತು ಮಾಸ್ಕ್..

- Advertisement -
- Advertisement -

ತಮಿಳುನಾಡು :  ಕೊರೊನಾದಿಂದಾಗಿ ಇವತ್ತು ಮಾಸ್ಕ್ ಇಲ್ಲದೇ ಮನೆಯಿಂದ ಹೊರಗೆ ಹೋಗೋದಕ್ಕೆ ಸಾಧ್ಯಾನೇ  ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾದಿಂದಾಗಿ ಏನೆಲ್ಲಾ ತೊಂದರೆಗಳಾಗುತ್ತಿದೆ, ಎಷ್ಟೆಲ್ಲಾ ಜನ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ ಅನ್ನೋ ಅರಿವಿದ್ದರೂ ಕೂಡ ಕೆಲವು ಜನ ಇನ್ನೂ ಕೂಡ ಮಾಸ್ಕ್ ಧರಿಸಿದೇ ಬೇಕಾಬಿಟ್ಟಿ ಅಲೆದಾಡುತ್ತಲೇ ಇದ್ದಾರೆ.

ಇಂತಹ ಮಂದಿಗೆ ಜಾಗೃತಿ ಮೂಡಿಸುವುದಕ್ಕಾಗಿ ತಮಿಳುನಾಡಿನ ಮಧುರೈನಲ್ಲಿ ರೆಸ್ಟೋರೆಂಟ್ ಒಂದರಲ್ಲಿ ತಯಾರಿಸುವ ಪರೋಟವನ್ನೇ ಮಾಸ್ಕ್ ವಿನ್ಯಾಸದಲ್ಲಿ ರೆಡಿ ಮಾಡಿ ಗ್ರಾಹಕರಿಗೆ ನೀಡಿದ್ದಾರೆ. ಇನ್ನೂ ಕೂಡ ಮಧುರೈನಲ್ಲಿ ಅದೆಷ್ಟೋ ಜನ ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಅವರಿಗೆ ಜಾಗೃತಿ ಮೂಡಿಸೋದಕ್ಕಾಗಿ ನಾವು ಈ ರೀತಿ  ಪರೋಟದಲ್ಲೇ ಮಾಸ್ಕ್ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ರೆಸ್ಟೋರೆಂಟ್ ಮ್ಯಾನೇಜರ್ ಪೂವಲಿಂಗಂ ಹೇಳಿದ್ದಾರೆ. ಇನ್ನು ರೆಸ್ಟೋರೆಂಟ್ ನ ಕಾಳಜಿಗೆ ಗ್ರಾಹಕರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಪರೋಟದಲ್ಲೇ ರೆಡಿಯಾಯ್ತು ನೋಡಿ ಮಾಸ್ಕ್#Corona #covid

Posted by Maha Xpress on Thursday, 9 July 2020

- Advertisement -

Latest News

error: Content is protected !!