Thursday, June 26, 2025
Homeಕರಾವಳಿಮಂಗಳೂರುಪುತ್ತೂರು; ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ; ಸ್ಥಳೀಯರಿಗೆ ಭರ್ಜರಿ ಕೋಳಿಯೂಟ

ಪುತ್ತೂರು; ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ; ಸ್ಥಳೀಯರಿಗೆ ಭರ್ಜರಿ ಕೋಳಿಯೂಟ

spot_img
- Advertisement -
- Advertisement -

ಪುತ್ತೂರು; ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿಯಾಗಿ ಸ್ಥಳೀಯರಿಗೆ ಭರ್ಜರಿ ಕೋಳಿಯೂಟ ಮಾಡುವ ಛಾನ್ಸ್ ಲಭಿಸಿದ ಘಟನೆ ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕದ ಕಳೆಂಜಿಮಲೆ ರಕ್ಷಿತಾರಣ್ಯದ ಒಳರಸ್ತೆಯಲ್ಲಿ ನಡೆದಿದೆ.

ತಮಿಳುನಾಡು ನೋಂದಣಿಯ ಪಿಕಪ್ ಟೆಂಪೋ ಇದಾಗಿದ್ದು, ಕನ್ಯಾನ ಜಂಕ್ಷನಿಂದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಾದುಹೋಗುವ ತೀರಾ ಕಡಿದಾದ ಏರು ರಸ್ತೆಯಲ್ಲಿ, ಮುಂದಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಸ್ತೆ ಬದಿಗೆ ಪಲ್ಟಿಯಾಗಿದೆ. ವಾಹನದಲ್ಲಿದ್ದ ಕೋಳಿಗಳಲ್ಲಿ ಕೆಲವು ಸಾವನಪ್ಪಿದ್ದು, ಸ್ಥಳೀಯರು ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಸ್ಥಳೀಯರಿಗೆ ಭರ್ಜರಿ ಬಾಡೂಟ ದೊರೆತಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

- Advertisement -
spot_img

Latest News

error: Content is protected !!