Tuesday, May 21, 2024
Homeಕರಾವಳಿಸುಳ್ಯ: ಬಾಡಿಗೆಗೆಂದು ಕೊಂಡೊಯ್ದು ರಿಕ್ಷ, ಚಾಲಕನಿಗೆ ಥಳಿಸಿ ರಿಕ್ಷಾ ಜೊತೆ ಪರಾರಿ !

ಸುಳ್ಯ: ಬಾಡಿಗೆಗೆಂದು ಕೊಂಡೊಯ್ದು ರಿಕ್ಷ, ಚಾಲಕನಿಗೆ ಥಳಿಸಿ ರಿಕ್ಷಾ ಜೊತೆ ಪರಾರಿ !

spot_img
- Advertisement -
- Advertisement -

ಸುಳ್ಯ: ಬಾಡಿಗೆಗೆಂದು ಕೊಂಡೊಯ್ದು ರಿಕ್ಷಾವನ್ನು ನಂತರ ಚಾಲಕನಿಗೆ ಥಳಿಸಿ ರಿಕ್ಷಾ ಕೊಂಡೊಯ್ಯುತ್ತಿದ್ದಾಗ ಆರೋಪಿಗಳು ಕೇರಳ ಪೊಲೀಸರಿಗೆ ಸೆರೆ ಸಿಕ್ಕ ಘಟನೆ ಸುಳ್ಯದಲ್ಲಿ ನಡೆದಿದೆ.

ಅಜ್ಜಾವರದಿಂದ ಆಟೋರಿಕ್ಷಾವನ್ನು ಮಂಡೆಕೋಲಿಗೆ ಬಾಡಿಗೆಗೆಂದು ಇಬ್ಬರು ಕರೆದೊಯ್ದಿದ್ದರು. ಆಟೋ ಅಡಂಗಾಯದ ಬಳಿ ತಲುಪುತ್ತಿದ್ದಾಗ ಆಟೋದಲ್ಲಿದ್ದ ವ್ಯಕ್ತಿ ಏಕಾಏಕಿ ಆಟೋ ಚಾಲಕ ಹುಸೈನ್ ಮೇಲೆ ಹಲ್ಲೆ ಮಾಡಿದ್ದಾರೆ.

ಆ ಬಳಿಕ ಆಟೋಚಾಲಕನ ಬಳಿಯಲ್ಲಿದ್ದ ಮೊಬೈಲ್ ಹಾಗೂ ಹಣವನ್ನು ಕಿತ್ತು ಕೇರಳದ ಕಡೆಗೆ ಆಟೋ ಸಮೇತ ಪರಾರಿಯಾಗಿದ್ದಾನೆ. ಘಟನೆ ತಿಳಿದ ಸ್ಥಳೀಯರು ಆದೂರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ ಹಿನ್ನೆಲೆ ಆದೂರು ಪೊಲೀಸರು ದೇವರಡ್ಕ ಪುದಿಯಂಬಲಂ ಎಂಬಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
spot_img

Latest News

error: Content is protected !!