- Advertisement -
![]()
- Advertisement -
ಪುತ್ತೂರು; ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಡೆದಿದೆ. ಕೆಯ್ಯೂರಿನ ನಾರಾಯಣ(47) ಮೃತ ದುರ್ದೈವಿ.
ಮನೆಯ ಮುಂಭಾಗದಲ್ಲಿದ್ದ ಬಲ್ಬ್ ಉರಿಯುತ್ತಿಲ್ಲ ಎಂದು ನಾರಾಯಣ ಅವರು ಸರಿಪಡಿಸುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆ ತಂದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಮೃತರು ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
- Advertisement -


