ಬೆಳ್ತಂಗಡಿ : ನೆರಿಯ ಗ್ರಾಮದ ಬಯಲು ಎಂಬಲ್ಲಿ ನ.27 ರಂದು ರಾತ್ರಿ 8:30 ರ ಸಮಯಕ್ಕೆ ಒಂಟಿ ಸಲಗ ಅಲ್ಟೋ ಕಾರಿನ ಮೇಲೆ ದಾಳಿ ಮಾಡಿತ್ತು.
ಈ ಆನೆ ದಾಳಿ ವೇಳೆ ಪುತ್ತೂರಿನ ಅಬ್ದುಲ್ ರಹಮಾನ್(40.ವ) ಮತ್ತು ನೆರಿಯದ ನಾಸಿಯಾ(30.ವ) ಇಬ್ಬರಿಗೆ ಗಾಯವಾಗಿತ್ತು. ಇದೀಗ ಆನೆ ದಾಳಿ ವೇಳೆ ಗಾಯಗೊಂಡಿದ್ದ ನೆರಿಯ ಗ್ರಾಮದ ಹಿಟ್ಟಾಡಿ ನಿವಾಸಿ ನಾಸಿಯಾ(30.ವ) ಅವರ ಮಗಳಾದ ಫಾತಿಮಾ ಅಲ್ಫಾ (1.ವ) ಗೆ ಆನೆ ದಾಳಿಯ ಸಂದರ್ಭದಲ್ಲಿ ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು. ಒಂದು ಎಲುಬು ಕಟ್ ಆಗಿರುವ ಬಗ್ಗೆ ಮನೆಯವರಿಗೆ ತಡವಾಗಿ ಬೆಳಕಿಗೆ ಬಂದಿದ್ದು ಬಳಿಕ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಗಾಯಗೊಂಡ ಮೂವರ ಬಗ್ಗೆ ವರದಿ: ಆನೆ ದಾಳಿಯಿಂದ ಮೂವರು ಗಾಯಗೊಂಡ ಬಗ್ಗೆ ನೆರಿಯ ಗ್ರಾಮದ ಡಿ.ಆರ್.ಎಫ್.ಓ ಯತೀಂದ್ರ ಮತ್ತು ತಂಡ ನ.28 ರಿಂದ ವರದಿಯನ್ನು ತಯಾರಿಸುತ್ತಿದ್ದು. ಈ ವರದಿಯನ್ನು ಅರಣ್ಯಾ ಇಲಾಖೆಯ ಮೇಲಾಧಿಕಾರಿಗಳಿಗೆ ಸಲ್ಲಿಸಲಿದ್ದು. ಬಳಿಕ ರಾಜ್ಯ ಸರಕಾರಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿ ಪರಿಹಾರ ಮೊತ್ತ ಸಿಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಹಾ ಎಕ್ಸ್‌ಪ್ರೆಸ್ ವೆಬ್ ಸೈಟ್ ಗೆ ತಿಳಿಸಿದ್ದಾರೆ.