Monday, June 8, 2026
Homeಕರಾವಳಿಪುತ್ತೂರು: ರಸ್ತೆಗೆ ಕೊಳೆತ ಕಲ್ಲಂಗಡಿ ಎಸೆದವರಿಗೆ ತಕ್ಕ ಶಾಸ್ತಿ ಮಾಡಿದ ನಗರಸಭೆ ಸದಸ್ಯ

ಪುತ್ತೂರು: ರಸ್ತೆಗೆ ಕೊಳೆತ ಕಲ್ಲಂಗಡಿ ಎಸೆದವರಿಗೆ ತಕ್ಕ ಶಾಸ್ತಿ ಮಾಡಿದ ನಗರಸಭೆ ಸದಸ್ಯ

- Advertisement -
- Advertisement -

ಪುತ್ತೂರು: ಕೊಳೆತ ಕಲ್ಲಂಗಡಿಯನ್ನು ರಸ್ತೆಗೆ ಎಸೆದು ಎಸ್ಕೆಪ್ ಆಗುತ್ತಿದ್ದವರಿಗೆ ಪುತ್ತೂರು ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಅವರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ. ಪುತ್ತೂರಿನ ಬೈಪಾಸ್ ರಸ್ತೆಯ ಬಳಿ ಕಲ್ಲಂಗಡಿ ಸಾಗಿಸುತ್ತಿದ್ದ ಲಾರಿ ಚಾಲಕ ಹಾಗೂ ಕ್ಲೀನರ್ ಕಲ್ಲಂಗಡಿಗಳನ್ನು ರಸ್ತೆಗೆ ಎಸೆಯುತ್ತಿದ್ದರು. ಇದನ್ನು ಗಮನಿಸಿದ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ಹಾಗೂ ಅಧಿಕಾರಿಗಳು ಬಿಸಾಕಿದವರ ಕೈಯಿಂದಲೇ ಕಲ್ಲಂಗಡಿಗಳನ್ನು ಹೆಕ್ಕಿಸಿ 5 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.

ಹಾಸನದಿಂದ ಕಲ್ಲಂಗಡಿಗಳನ್ನು ತಂದು ಮಾರಾಟ ಮಾಡಿ ವಾಪಾಸ್ ಹೋಗುವಾಗ ಕೊಳೆತ ಕಲ್ಲಂಗಡಿಗಳನ್ನು ಎಸೆದು ಹೋಗುತ್ತಿದ್ದರು ಎನ್ನಲಾಗಿದೆ. ಬೇಕಾದೆಡೆ ಕೋಳಿ ತ್ಯಾಜ್ಯ, ಮೀನಿನ ತ್ಯಾಜ್ಯ, ತರಕಾರಿ, ಹಣ್ಣುಗಳ ತ್ಯಾಜ್ಯವನ್ನು ನಮ್ಮದೇ ಆಸ್ತಿ ಎಂಬಂತೆ ಎಸೆದು ಹೋಗುವವರಿಗೆ ಇದೊಂದು ಪಾಠವಾಗಿದೆ.

- Advertisement -

Latest News

error: Content is protected !!