Tuesday, July 1, 2025
Homeಕರಾವಳಿಕಾಸರಗೋಡು: ಉತ್ಸವಕ್ಕೆಂದು ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ

ಕಾಸರಗೋಡು: ಉತ್ಸವಕ್ಕೆಂದು ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ

spot_img
- Advertisement -
- Advertisement -

ಕಾಸರಗೋಡು: ಉತ್ಸವಕ್ಕೆಂದು ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವ ಬೈಕ್ ಮಗುಚಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೇಲ್ಪರಂಬ ಠಾಣಾ ವ್ಯಾಪ್ತಿಯ ಮಾಂಗಾಡ್ ಎಂಬಲ್ಲಿ ನಡೆದಿದೆ. ಮೃತರನ್ನು ಫೋಟೋಗ್ರಫಿ ವಿದ್ಯಾರ್ಥಿಯಾಗಿದ್ದ ಮುಳ್ಳೇರಿಯ ಪೆರಿಯಡ್ಕದ ವಿಜೇಶ್ (20) ಎಂದು ಗುರುತಿಸಲಾಗಿದೆ.

ಆದಿತ್ಯವಾರ ರಾತ್ರಿ ಸ್ನೇಹಿತರ ಜೊತೆ ತೃಕ್ಕನಾಡ್‌ಗೆ ಉತ್ಸವಕ್ಕೆಂದು ತೆರಳಿದ್ದು, ಸೋಮವಾರ ಬೆಳಿಗ್ಗೆ ವಿಜೇಶ್ ನಾಪತ್ತೆಯಾದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದ್ದು, ಮನೆಯವರು ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಮೊಬೈಲ್ ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಕಂಡುಬರದಿದ್ದಾಗ ಸಂಶಯಗೊಂಡು, ಮೊಬೈಲ್ ಟವರ್ ನ ಲೊಕೇಶನ್ ಗಮನಿಸಿ ಹುಡುಕಾಟ ನಡೆಸಲಾಗಿತ್ತು. ಈ ನಡುವೆ ಸೋಮವಾರ ತಡರಾತ್ರಿ ಮಾಂಗಾಡ್ ಕುಳಿಕುನ್ನು ಎಂಬಲ್ಲಿನ ತಿರುವಿನಲ್ಲಿ ರಸ್ತೆ ಬದಿಯ ಹೊಂಡದಲ್ಲಿ ಬೈಕ್ ಮಗುಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಮೀಪ ವಿಜೇಶ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೇಲ್ಪರಂಬ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮಂಗಳವಾರ ಬೆಳಿಗ್ಗೆ ಮಹಜರು ನಡೆಸಿದರು. ಇನ್ನು ಬೈಕ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

- Advertisement -
spot_img

Latest News

error: Content is protected !!