Friday, May 3, 2024
Homeತಾಜಾ ಸುದ್ದಿಕೇರಳದ ಚಿಲ್ಡ್ರನ್ ಹೋಮ್‌ನಿಂದ 6 ಬಾಲಕಿಯರ ನಾಪತ್ತೆ ಪ್ರಕರಣ- ಓರ್ವ ಬಾಲಕಿ ಬೆಂಗಳೂರಿನಲ್ಲಿ ಪತ್ತೆ

ಕೇರಳದ ಚಿಲ್ಡ್ರನ್ ಹೋಮ್‌ನಿಂದ 6 ಬಾಲಕಿಯರ ನಾಪತ್ತೆ ಪ್ರಕರಣ- ಓರ್ವ ಬಾಲಕಿ ಬೆಂಗಳೂರಿನಲ್ಲಿ ಪತ್ತೆ

spot_img
- Advertisement -
- Advertisement -

ಬೆಂಗಳೂರು: ಕೇರಳದ ಗವರ್ನಮೆಂಟ್ ಚಿಲ್ಡ್ರನ್ ಹೋಮ್‌ನಿಂದ 6 ಅಪ್ರಾಪ್ತ ಬಾಲಕಿಯರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕಿ ಬೆಂಗಳೂರಲ್ಲಿ ನಿನ್ನೆ ಪತ್ತೆಯಾಗಿದ್ದಾಳೆ.

ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಬಾಲಕಿಯಲ್ಲಿ ಒಬ್ಬರು ಪತ್ತೆಯಾಗಿದ್ದು, ಈಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಣರಾಜೋತ್ಸವ ಆಚರಣೆಯ ಬಳಿಕ 6 ಮಂದಿ ಬಾಲಕಿಯರು ಸಂಸ್ಥೆಯಿಂದ ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಚೆವಯೂರ್ ಠಾಣೆಗೆ ಚಿಲ್ಡ್ರನ್ ಹೋಮ್ ಅಧೀಕ್ಷಕರು ದೂರು ನೀಡಿದರು.

ದೂರಿನನ್ವಯ ಕಾರ್ಯಪ್ರವೃತ್ತರಾಗಿದ್ದ ಕೇರಳ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಾಲಕಿಯೋರ್ವಳು ಪತ್ತೆಯಾಗಿದ್ದಾಳೆ. ಇನ್ನೂ ಐವರು ಬಾಲಕಿಯರ ಪತ್ತೆ ಕಾರ್ಯ ಮುಂದುವರೆದಿದೆ.

- Advertisement -
spot_img

Latest News

error: Content is protected !!