Saturday, June 13, 2026
Homeಕರಾವಳಿಉಡುಪಿಕಾರ್ಕಳ: ಕಾರಿನಲ್ಲಿ ಮನೆಯಿಂದ ತೆರಳಿದ ವ್ಯಕ್ತಿಯೊಬ್ಬರು ನಾಪತ್ತೆ

ಕಾರ್ಕಳ: ಕಾರಿನಲ್ಲಿ ಮನೆಯಿಂದ ತೆರಳಿದ ವ್ಯಕ್ತಿಯೊಬ್ಬರು ನಾಪತ್ತೆ

- Advertisement -
- Advertisement -

ಕಾರ್ಕಳ: ಕಾರಿನಲ್ಲಿ ಮನೆಯಿಂದ ತೆರಳಿದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕಾರ್ಕಳ ಸಮೀಪ ಸಾಣೂರು ಗ್ರಾಮದಲ್ಲಿ ನಡೆದಿದೆ. ಪ್ರಶಾಂತ (35) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ ಅವರ ಪತ್ನಿ ದೀಪಿಕಾ (35) ಅವರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಶಾಂತ (35) ಅವರು ದಿನಾಂಕ 05/11/2025 ರಂದು ಬೆಳಿಗ್ಗೆ 8:30 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿರುವ ನಮ್ಮ ಪವಮಾನ ನಿವಾಸದಿಂದ ಕೆಎ-19 ಎಮ್‌‌ಇ-7879 ನೇ ನಂಬ್ರದ ಕಾರಿನಲ್ಲಿ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್ ಕರೆ ಸಹ ಸ್ವೀಕರಿಸದೇ ಕಾಣೆಯಾಗಿದ್ದಾರ ಎಂದು ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. .

- Advertisement -

Latest News

error: Content is protected !!