ಬಂಟ್ವಾಳ: ತುಂಬೆ ಸಮೀಪದ ನೆತ್ತರಕೆರೆ ಎಂಬಲ್ಲಿ ಕಡಬ ತಾಲೂಕಿನ ಬಿಳಿನೆಲೆ ಗೂನಡ್ಕ ನಿವಾಸಿ ಶಶಿಕುಮಾರ್ ಎಸ್ ಎನ್ನುವವರು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಡಿ.17ರ ಮಂಗಳವಾರದಂದು ಸಂಭವಿಸಿದೆ.
ಸುಬ್ರಮಣ್ಯದಿಂದ ಮಂಗಳೂರಿಗೆ ರಾತ್ರಿ ಸುಮಾರು 11 ಗಂಟೆಯ ವೇಳೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದರಿಂದ ಕೆಳಗೆ ಬಿದ್ದು ಇವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬೋಗಿಯಲ್ಲಿದ್ದ ಇತರರು ಮಂಗಳೂರು ರೈಲ್ವೆ ಪೋಲಿಸರಿಗೆ ನೀಡಿದ ಮಾಹಿತಿಯಂತೆ, ರೈಲಿನ ಮೆಟ್ಟಿಲ ಮೇಲೆ ಕುಳಿತು ಶಶಿಕುಮಾರ್ ಅವರು ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ರೈಲಿನ ಹಳಿಯ ಸಮೀಪದ ಪೊದೆಯಲ್ಲಿ ತಲೆಗೆ ಏಟು ಬಿದ್ದು ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಆದರೆ ಈತನ ಹೆಸರು, ವಿಳಾಸದ ಮಾಹಿತಿ ಸಿಗುವಾಗ ತಡವಾಗಿದ್ದು, ಆತನ ಸಾವಿನ ಬಗ್ಗೆ ಒಂದಷ್ಟು ಗೊಂದಲಗಳು ಮೂಡಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಈ ಘಟನೆಗೆ ಸ್ಪಷ್ಟನೆ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.