Saturday, May 18, 2024
Homeಕರಾವಳಿಉಡುಪಿಹೆಬ್ರಿ: ವ್ಯಕ್ತಿಯೋರ್ವರು ಸೀತಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮುಳುಗಿ ಸಾವು !

ಹೆಬ್ರಿ: ವ್ಯಕ್ತಿಯೋರ್ವರು ಸೀತಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮುಳುಗಿ ಸಾವು !

spot_img
- Advertisement -
- Advertisement -

ಹೆಬ್ರಿ: ಇಲ್ಲಿನ ಮಠದಬೆಟ್ಟುವಿನಲ್ಲಿ ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರು ಮೊಹಮ್ಮದ್ ಇಕ್ವಾಲ್ ( 24 ). ಮೊಹಮ್ಮದ್ ಇಕ್ವಾಲ್ ಅವರು ತಮ್ಮ ಸಂಬಂಧಿ ನೌಫಲ್ ಅವರೊಂದಿಗೆ ಹೆಬ್ರಿ ಗ್ರಾಮದ ಮಠದಬೆಟ್ಟುವಿನಲ್ಲಿರುವ ಸಂಬಂಧಿಕರಾದ ಮುಸ್ತಫಾ ಎಂಬುವವರ ಮನೆಗೆ ಕುಟುಂಬ ಸಮೇತರಾಗಿ ಹೋಗಿದ್ದರು.

ಮೊಹಮ್ಮದ್ ಇಕ್ವಾಲ್ ಹಾಗೂ ಇಬ್ರಾಹಿಂ ಖಲೀಲ್ ಅವರು ಮನೆ ಬಳಿ ಇರುವ ಸೀತಾನದಿಗೆ ಸ್ನಾನ ಮಾಡಲು ಹೋಗಿದ್ದರು ಈ ವೇಳೆ ನೀರಿನಲ್ಲಿ ಇಳಿದು ಸ್ನಾನ ಮಾಡುತ್ತಿರುವಾಗ ಮೊಹಮ್ಮದ್ ಇಕ್ವಾಲ್ ರವರು ಆಕಸ್ಮಿಕವಾಗಿ ಮುಳುಗಿ ಮೃತ ಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!