Friday, June 5, 2026
Homeಕರಾವಳಿಕಾಸರಗೋಡುಕೊರೊನಾದಿಂದಾಗಿ ಈ ಮಹಿಳೆ ತನ್ನ ಹೆಸರನ್ನು ಹೇಳೋದಕ್ಕೂ ಮುಜುಗರ ಪಡುತ್ತಿದ್ದಾರೆ ಯಾಕೆ ಗೊತ್ತಾ?

ಕೊರೊನಾದಿಂದಾಗಿ ಈ ಮಹಿಳೆ ತನ್ನ ಹೆಸರನ್ನು ಹೇಳೋದಕ್ಕೂ ಮುಜುಗರ ಪಡುತ್ತಿದ್ದಾರೆ ಯಾಕೆ ಗೊತ್ತಾ?

- Advertisement -
- Advertisement -

ಕೇರಳ : ಕೊರೊನಾ ಇಡೀ ವಿಶ್ವವನ್ನೇ ತನ್ನ ಹಿಡಿತದಲ್ಲಿಸಿರಿಸಿಕೊಂಡು ಹೇಗೆ ಆಟ ಆಡಿಸುತ್ತಿಗೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಪ್ರತಿದಿನ ಆರಂಭ ಆಗೋದೆ ಕೋವಿಡ್ ಸುದ್ದಿಗಳ ಮೂಲಕವೇ ಅನ್ನೋ ಹಾಗಾಗಿದೆ ಪರಿಸ್ಥಿತಿ. ಆದ್ರೆ ಕೇರಳದ ಮಹಿಳೆಯೊಬ್ಬರು ಪಾಡು ಕೇಳಿದ್ರೆ ಅಯ್ಯೋ! ಅನ್ಸುತ್ತೆ. ಕೊರೊನಾದಿಂದಾಗಿ ಅವರು ಪ್ರತಿದಿನ ಕಣ್ಣೀರು ಇಡೋ ಪರಿಸ್ಥಿತಿ ಬಂದೊದಗಿದೆ. ಹಾಗಾಂಥ ಅವರಿಗೇನು ಕೋವಿಡ್ ಪಾಸಿಟಿವ್ ಅಲ್ಲ. ಪಾಪ ಅವರೇ ಹೆಸರೇ ಅವರಿಗೆ ಸದ್ಯಕ್ಕೆ ಶಾಪವಾಗಿದೆ.

ಹೌದು.. ಕೇರಳದ ಕೊಟ್ಟಾಯಂನ ಮಹಿಳೆಯೊಬ್ಬರು ಈಗ ತಮ್ಮ ಹೆಸರು ಹೇಳಲು ಮುಜುಗರ ಪಡುವಂತಾಗಿದೆ. ಏಕೆಂದರೆ, ಇವರ ಹೆಸರೇ ಕೊರೊನಾ! ಹಾಗೆಂದು, ಈಗ ಬಂದಿರುವ ಕೊರೊನಾವನ್ನು ನೋಡಿ ಅವರು ಹೆಸರು ಬದಲಿಸಿಕೊಂಡಿಲ್ಲ. ಕೊರೊನಾಕ್ಕಿಂತಲೂ ಮುಂಚೆಯೇ ಅವರು ಕೊರೊನಾ ಆಗಿದ್ದವರು.

“ನನ್ನ ಹೆಸರಿನ ಸಾಂಕ್ರಾಮಿಕವೊಂದು ಹರಡುತ್ತದೆ ಎಂದು ಕನಸು ಮನಸಲ್ಲೂ ಭಾವಿಸಿರಲಿಲ್ಲ. ಬಾಲ್ಯದಲ್ಲಿ ನನ್ನ ಅಪ್ಪ-ಅಮ್ಮ ಬ್ಯಾಪ್ಟಿಸಂ ಮಾಡಿಸಲು ಸ್ಥಳೀಯ ಚರ್ಚ್‌ಗೆ ಕರೆದೊಯ್ದಾಗ ಅಲ್ಲಿನ ಫಾದರ್‌ ನನಗೆ “ಕೊರೊನಾ’ ಎಂದು ನಾಮಕರಣ ಮಾಡಿದ್ದರು. ಕೊರೊನಾ ಅಂದರೆ “ಕಿರೀಟ’ ಅಂತ ಫಾದರ್‌ ಜೇಮ್ಸ್‌ ನನ್ನ ಪೋಷಕರಿಗೆ ಹೇಳಿದ್ದರು’ ಎನ್ನುತ್ತಾರೆ ಮಿಸೆಸ್‌ ಎಸ್‌. ಕೊರೊನಾ.

34 ವರ್ಷದ ಕೊರೊನಾಗೆ ಇಬ್ಬರು ಪುತ್ರರಿದ್ದಾರೆ. ಕೊರೊನಾ ಸೋಂಕು ಬಂದ ಮೇಲೆ ನನ್ನ ಹೆಸರನ್ನು ಉಲ್ಲೇಖೀಸಿ ಅನೇಕರು ವ್ಯಂಗ್ಯವಾಡಿದ್ದೂ ಇದೆ. ಕೆಲವರು ನನ್ನನ್ನು ನೋಡಿ “ಗೋ ಕೊರೊನಾ ಗೋ’ ಎನ್ನುತ್ತಾರೆ. ನನ್ನ ಮಕ್ಕಳೇ ನನ್ನನ್ನು “ವೈರಸ್‌ ಅಮ್ಮಾ’, “ಕೊರೊನಮ್ಮಾ’ ಎಂದೆಲ್ಲ ಕರೆಯುತ್ತಾರೆ. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜನರು ನನ್ನಂಥ ಬಡ ಕೊರೊನಾಳನ್ನು ಬಿಟ್ಟು, ನೈಜ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಂಡರೆ ಅಷ್ಟೇ ಸಾಕು ಎನ್ನುತ್ತಾರೆ ಶ್ರೀಮತಿ ಕೊರೊನಾ.

- Advertisement -

Latest News

error: Content is protected !!