Sunday, June 29, 2025
Homeಕರಾವಳಿಪುತ್ತೂರು; ಪುರುಷಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಿಂದೂ ಕಾರ್ಯಕರ್ತ ಹಲ್ಲೆ ಆರೋಪ

ಪುತ್ತೂರು; ಪುರುಷಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಿಂದೂ ಕಾರ್ಯಕರ್ತ ಹಲ್ಲೆ ಆರೋಪ

spot_img
- Advertisement -
- Advertisement -

ಪುತ್ತೂರು; ಪುರುಷಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಿಂದೂ ಕಾರ್ಯಕರ್ತ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಕಾಂಗ್ರೆಸ್ ಕಾರ್ಯಕರ್ತನ ಕುತ್ತಿಗೆ, ಹೊಟ್ಟೆ, ತುಟಿಗೆ ಕೈಯಿಂದ ಗಂಭೀರ ಹಲ್ಲೆ ನಡೆಸಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನು ರಾಜಕೀಯ ವೈಷಮ್ಯದಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಹಲ್ಲೆಗೊಳಗಾದ ವ್ಯಕ್ತಿ ಕಳೆದ ಕೆಲವು ತಿಂಗಳಿನ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಎನ್ನಲಾಗಿದೆ. ಅಲ್ಲದೇ ಚುನಾವಣೆ ವೇಳೆ ಶಾಸಕ ಅಶೋಕ್ ರೈ ಪರ  ಪ್ರಚಾರ ಮಾಡಿದ್ದ. ಇನ್ನು ಹಲ್ಲೆಗೊಳಗಾದ ವ್ಯಕ್ತಿ ಮತನಾಡಿ ನನಗೂ ಅವನಿಗೂ ಯಾವುದೇ ಪೂರ್ವ ದ್ವೇಷವಿಲ್ಲ. ಆದರೂ ಆತ ನನಗೆ ಯಾಕೆ ಹೊಡೆದ ಎನ್ನುವುದು ಗೊತ್ತಿಲ್ಲ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!