Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮೈರೋಳ್ತಡ್ಕ ಮುಂಡೂರು ನಿವಾಸಿ ಗಿರಿಯಪ್ಪರವರ ಮನೆ ಮೇಲೆ ಗುಡ್ಡ ಕುಸಿದು ಹಾನಿ: ಸ್ಥಳಕ್ಕೆ...

ಬೆಳ್ತಂಗಡಿ : ಮೈರೋಳ್ತಡ್ಕ ಮುಂಡೂರು ನಿವಾಸಿ ಗಿರಿಯಪ್ಪರವರ ಮನೆ ಮೇಲೆ ಗುಡ್ಡ ಕುಸಿದು ಹಾನಿ: ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ

- Advertisement -
- Advertisement -

ಬೆಳ್ತಂಗಡಿ  ತಾಲೂಕಿನಲ್ಲಿ  ಸುರಿಯುತ್ತಿರುವ ವಿಪರೀತ ಮಳೆಯ ಪರಿಣಾಮ ಬಂದಾರು ಗ್ರಾಮ ಮೈರೋಳ್ತಡ್ಕ ಮುಂಡೂರು ನಿವಾಸಿ ಗಿರಿಯಪ್ಪರವರ ಮನೆಗೆ ಬೃಹತ್ ಗಾತ್ರದ ಗುಡ್ಡ ಕುಸಿದು ಮನೆಗೆ ಹಾನಿಯಾಗಿದ್ದು  ವಾಸಕ್ಕೆ ತುಂಬಾ ಕಷ್ಟ ಸಾಧ್ಯವಾಗಿದ್ದು ಮರ, ಹಾಗೂ ಗುಡ್ಡ ಕುಸಿದು ಮನೆಗೆ ಸಂಪೂರ್ಣ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿ,ಆರ್ಥಿಕ ಸಹಾಯ ನೀಡಿ, ಸರಕಾರದಿಂದ ಶೀಘ್ರ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಬೆಳ್ತಂಗಡಿ  ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ, ಪ್ರಮುಖರಾದ ಪ್ರಶಾಂತ್ ಗೌಡ ನಿರುಂಬುಡ ಹಾಗೂ ಮನೆಯವರು  ಉಪಸ್ಥಿತರಿದ್ದರು.

- Advertisement -

Latest News

error: Content is protected !!