Thursday, June 4, 2026
Homeತಾಜಾ ಸುದ್ದಿಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಕಾರು ಚಾಲಕ ಸ್ಥಳದಲ್ಲೇ ಮೃತ್ಯು

ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಕಾರು ಚಾಲಕ ಸ್ಥಳದಲ್ಲೇ ಮೃತ್ಯು

- Advertisement -
- Advertisement -

ಶಿವಮೊಗ್ಗ:  ಖಾಸಗಿ ಬಸ್ ಮತ್ತು ಕಾರಿನ ನಡುವೆ ಶಿರಾಳಕೊಪ್ಪದ ದೇವಿಕೊಪ್ಪ ಬಳಿಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರದಂದು ಮಧ್ಯಾಹ್ನ ನಡೆದಿದೆ. ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕಾರು ಶಿವಮೊಗ್ಗ ಕಡೆಯಿಂದ ಆನವಟ್ಟಿ ಕಡೆಗೆ ಹೊರಟಿದ್ದು, ಖಾಸಗಿ ಬಸ್ ಆನವಟ್ಟಿಯಿಂದ ಶಿವಮೊಗ್ಗ ಕಡೆ ಬರುತ್ತಿತ್ತು. ಅತಿ ವೇಗವಾಗಿ ಬಂದ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡಿದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಇನ್ನು ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಕಾರು ಚಾಲಕನ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಕಾರು ಚಾಲಕನ ಗುರುತು ಇನ್ನಷ್ಟೆ ತಿಳಿಯಬೇಕಿದೆ.

- Advertisement -

Latest News

error: Content is protected !!