ಬೆಳ್ತಂಗಡಿ : ಕಾರ್ಕಳದಿಂದ ಸವಣಾಲು ಗ್ರಾಮದ ಇತಿಹಾಸ ಪ್ರಸಿದ್ಧ ಭೈರವ ಕಲ್ಲು ಶ್ರೀ ಭೈರವ ಮೂಜಿಲ್ನಾಯ ಪುರುಷಾಯ ದೈವಸ್ಥಾನಕ್ಕೆ ನೂತನ ಶಿಲಾಮಯ ಗರ್ಭಗುಡಿಯ ಶಿಲೆಗಳನ್ನು ಅದ್ಧೂರಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯ್ತು.

ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡ್ರು. ನಂತರ ಮೇ. 22, 23, 24 ರಂದು ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಠಾ ಕಲಶೋತ್ಸವದ ಸಮಾಲೋಚನಾ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಷ್ಠಾ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಲಕೃಷ್ಣ ವಿ. ಶೆಟ್ಟಿ ಸಾಲಿಗ್ರಾಮ, ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರವನ್ನು ಕೋರಿದ್ರು.

ಸಭೆಯಲ್ಲಿ ಉಪ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಸಮಿತಿ ಪ್ರಮುಖರಾದ ರಾಮಣ್ಣ ಎಂ.ಕೆ ಜಾಲಡೆ , ಪರಮೇಶ್ವರ್ ಎಂ.ಕೆ ಜಾಲಡೆ, ಚಿನ್ನಯ ಎಂ.ಕೆ, ಕೃಷ್ಣಪ್ಪ ಗೌಡ ದೇವಸ, ಲ|ರಘರಾಮ ಗಾಂಭಿರ್ , ವಿಷ್ಟು ಮೂತಿ೯ ಭಟ್, ಪ್ರಭಾಕರ ಆಚಾರ್ಯ, ಲೋಕನಾಥ್ ಶೆಟ್ಟಿ, ಜಾರಪ್ಪ ಎಂ.ಕೆ, ಕೃಷ್ಣಪ್ಪ ಎಂ.ಕೆ, ಬಾಡಡ್ಕ, ವಸಂತ ಪೇಲಿ , ನಾರಾಯಣ ಆಚಾರ್ಯ , ರಾಮಚಂದ್ರ ಭಟ್ ದೆಂತಾಜೆ, ಸಂತೋಷ ಗೌಡ, ಉದಯ ಕುಮಾರ್, ಗೋಪಾಲ ಗೌಡ, ವಸಂತ ಮತ್ತೀತರರು ಉಪಸ್ಥಿತರಿದ್ದರು.ಗಣೇಶ್ ಭಂಡಾರಿ ನಡ್ತಿಕಲ್ಲು ಕಾಯ೯ಕ್ರಮ ನಿರೂಪಿಸಿ, ಧನ್ಯವಾದ ವಿತ್ತರು.