Tuesday, June 9, 2026
Homeಕರಾವಳಿಮಂಗಳೂರುಮಂಗಳೂರು: ವಿದೇಶ ಪ್ರವಾಸದ ಆಸೆಯಿಂದ ಒಂದೂವರೆ ಲಕ್ಷ ಕಳೆದುಕೊಂಡ ದಂಪತಿ

ಮಂಗಳೂರು: ವಿದೇಶ ಪ್ರವಾಸದ ಆಸೆಯಿಂದ ಒಂದೂವರೆ ಲಕ್ಷ ಕಳೆದುಕೊಂಡ ದಂಪತಿ

- Advertisement -
- Advertisement -

ಮಂಗಳೂರು: ವಿದೇಶ ಪ್ರವಾಸದ ಆಸೆಯಿಂದ ದಂಪತಿ ಒಂದೂವರೆ ಲಕ್ಷ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜೆಸಿಂತಾ ಡಿ’ಸೋಜಾ ಎಂಬವರಿಗೆ ಕಳೆದ ಡಿಸೆಂಬರ್‌ನಲ್ಲಿ ಫೋನ್‌ ಕರೆಯೊಂದು ಬಂದಿತ್ತು. ಅದರಲ್ಲಿ ನಿಮಗೆ ಗಿಫ್ಟ್‌ ವೋಚರ್‌ ಬಂದಿದ್ದು, ಮಂಗಳೂರಿನ ಹಂಪನಕಟ್ಟೆಯ ಹೊಟೇಲ್‌ ಒಂದರಿಂದ ಕಲೆಕ್ಟ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ದೂರುದಾರೆ ಮತ್ತು ಅವರ ಗಂಡ ಡಿ. 14ರಂದು ಸಂಜೆ 5 ಗಂಟೆಗೆ ಹೊಟೇಲ್‌ಗೆ ಹೋಗಿದ್ದು, ಅಲ್ಲಿ ಹರ್ಬಾಝ್ ಮತ್ತು ಪ್ರಿಯಾಂಕಾ ಎನ್ನುವ ಹೆಸರಿನ ಇಬ್ಬರು “ಡ್ರೀಮಿ ಹೆವೆನ್ಸ್‌ ಕ್ಲಬ್‌ ಪ್ರೈ.ಲಿ. ಸಿಬ್ಬಂದಿ’ ಎಂದು ಪರಿಚಯಿಸಿಕೊಂಡಿದ್ದಾರೆ. ರಜಾ ಸಮಯದಲ್ಲಿ ದೇಶ-ವಿದೇಶದಲ್ಲಿ ಪ್ರವಾಸ ಪ್ಯಾಕೇಜ್‌ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದರು.

ಈ ವೇಳೆ ಜೆಸಿಂತಾ ಅವರು ಜಾರ್ಜಿಯಾ ಪ್ರವಾಸ ಪ್ಯಾಕೇಜ್‌ ಇದೆಯೇ ಎಂದು ಕೇಳಿದಾಗ ಅದಕ್ಕೂ ವ್ಯವಸ್ಥೆ ಇದೆ ಎಂದು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ದಂಪತಿ ಅವರು ನೀಡಿದ ಸಂಸ್ಥೆಯ ಬ್ಯಾಂಕ್‌ ಖಾತೆಯ ಸ್ಕ್ಯಾನರ್‌ಗೆ ಒಟ್ಟು 1,51,800 ರೂ. ವಿವಿಧ ಮೂಲಗಳ ಮೂಲಕ ಜಮೆ ಮಾಡಿದ್ದಾರೆ. ಮೂರು ವಾರಗಳ ಬಳಿಕ ಅವರು ನೀಡಿದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಿಲ್ಲ. ಹಣವನ್ನು ವಾಪಸು ಕೇಳಲು ಆರಂಭಿಸಿದ ಬಳಿಕ ಕರೆಯನ್ನೂ ಸ್ವೀಕರಿಸಲಿಲ್ಲ. ವಿದೇಶಕ್ಕೆ ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!