- Advertisement -
- Advertisement -
ಕೋಟ: ಯಡಾಡಿ-ಮತ್ಯಾಡಿಯ ನಾಲ್ತೂರು ಗುಡ್ಡೆಯಂಗಡಿಯ ಬಳಿಯ ಮನೆ ಮಗುವೊಂದಕ್ಕೆ ಇಂಜೆಕ್ಷನ್ ಹಾಕಿಸಿದ ಬಳಿಕ ಜ್ವರದಿಂದ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಜ. 13ರಂದು ಸಂಭವಿಸಿದೆ.
ಇಲ್ಲಿನ ನಿವಾಸಿ ಗುರುರಾಜ್ ಅವರ ಗಂಡು ಮಗು ಸಾವನ್ನಪ್ಪಿದ್ದು, ಮಗುವಿಗೆ ಜ. 10ರಂದು ಎರಡೂವರೆ ತಿಂಗಳ ಇಂಜೆಕ್ಷನ್ ಕೊಡಿಸಲಾಗಿತ್ತು. ಸಂಜೆ ವೇಳೆಗೆ ಜ್ವರ ಬಂದಿದ್ದು ಔಷಧ ನೀಡಿದಾಗ ಸ್ವಲ್ಪ ಕಡಿಮೆ ಆಗಿತ್ತು ಎನ್ನಲಾಗಿದೆ. ಜ. 13ರಂದು ಮತ್ತೆ ಜ್ವರ ಉಲ್ಬಣಿಸಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.
ಘಟನೆಯ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -