Monday, June 8, 2026
Homeಕರಾವಳಿಕಡಬ; ಬಸ್ ಹತ್ತಲು ಓಡಾಡುವಾಗ ಕಾರು ಡಿಕ್ಕಿ; ವಿದ್ಯಾರ್ಥಿನಿಗೆ ಗಂಭೀರ ಗಾಯ

ಕಡಬ; ಬಸ್ ಹತ್ತಲು ಓಡಾಡುವಾಗ ಕಾರು ಡಿಕ್ಕಿ; ವಿದ್ಯಾರ್ಥಿನಿಗೆ ಗಂಭೀರ ಗಾಯ

- Advertisement -
- Advertisement -

ಕಡಬ; ಬಸ್ ಹತ್ತಲು ಓಡಾಡುವಾಗ ಕಾರು ಡಿಕ್ಕಿಯಾಗಿ  ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿರುವ ಘಟನೆ ನ.22 ಮುಂಜಾನೆ ಹೊಸ್ಮಠ ಬಳಿ ನಡೆದಿದೆ.  ದೇರಾಜೆಯ ದೀಕ್ಷಾ ಗಾಯಗೊಂಡ ವಿದ್ಯಾರ್ಥಿನಿ. ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಪ್ಪಿನಂಗಡಿ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸಮಠ ದೇರಾಜೆಯಲ್ಲಿ ಕಡಬದಿಂದ ಹೊರಟ ಬಸ್ ದೇರಾಜೆ ಬಸ್ ನಿಲ್ದಾಣದ ಬಳಿ ನಿಂತಿತ್ತು. ಈ ವೇಳೆ ಲಿಂಕ್ ರಸ್ತೆಯಲ್ಲಿ ಬಂದು ಬೈಕ್ ನಿಂದ ಇಳಿದು ದೀಕ್ಷಾ ರಸ್ತೆಯ ಇನ್ನೊಂದು ಬದಿಗೆ ಅವಸರದಿಂದ ಓಡುವಾಗ ಉಪ್ಪಿನಂಗಡಿ ಕಡೆಯಿಂದ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.ಈ ರಸ್ತೆ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಗಾಯಾಳು ವಿದ್ಯಾರ್ಥಿನಿಯನ್ನು ಪುತ್ತೂರಿಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಲಭಿಸಿದೆ.. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!