Saturday, June 6, 2026
Homeತಾಜಾ ಸುದ್ದಿದೇಶಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ

ದೇಶಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ

- Advertisement -
- Advertisement -

ನವದೆಹಲಿ: ಭಾರತದಲ್ಲಿ 80 ದಿನಗಳ ವಿರಾಮದ ನಂತರ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾನುವಾರ ಪ್ರತಿ ಲೀಟರ್‌ಗೆ 60 ಪೈಸೆ ಏರಿಕೆ ಮಾಡಲಾಗಿದೆ .
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿದ ಕಾರಣ ಕಳೆದ 80 ದಿನಗಳಿಂದ ಏರಿಕೆ ಕಾಣದಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್‌ಗೆ 71.26 ರೂ.ಗಳಿಂದ 71.86 ರೂ.ಗೆ ಏರಿಸಲಾಗಿದ್ದರೆ, ಡೀಸೆಲ್ ದರವನ್ನು ಲೀಟರ್‌ಗೆ 69.39 ರೂ.ಗೆ 69.99 ರೂ.ಗೆ ಹೆಚ್ಚಿಸಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆ ತಿಳಿಸಿದೆ. ದೈನಂದಿನ ಬೆಲೆ ಪರಿಷ್ಕರಣೆ ಪುನರಾರಂಭಗೊಂಡಿದೆ ಎಂದು ತೈಲ ಕಂಪನಿಯ ಮೂಲಗಳಿಂದ ತಿಳಿದು ಬಂದಿದೆ. ಬೆಲೆ ಏರಿಕೆ ನಂತರ ಭಾನುವಾರದಿಂದ ಪೆಟ್ರೋಲ್ 74.18 ರುಪಾಯಿ, ಡಿಸೇಲ್ 66.54 ದರ ಬೆಂಗಳೂರಿನಲ್ಲಿ ನಿಗದಿಯಾಗಿದೆ.
ಕಳೆದ ಮಾರ್ಚ್ 16 ರಲ್ಲಿ ತೈಲ ಕಂಪೆನಿಗಳು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದ್ದವು. ಆ ನಂತರ ಕಚ್ಚಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಈ ವೇಳೆ ಕೇಂದ್ರ ಸರ್ಕಾರ ಸುಂಕ ಹೆಚ್ಚಿಗೆ ಮಾಡಿ ಖಜಾನೆ ತುಂಬಿಸಿಕೊಳ್ಳುವ ಪ್ರಯತ್ನ ನಡೆಸಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ ಆಗಿರುವುದರಿಂ ದೇಶಿಯ ಮಾರುಕಟ್ಟೆಯಲ್ಲೂ ದರ ಹೆಚ್ಚಳವಾಗಿದೆ.

- Advertisement -

Latest News

error: Content is protected !!