Friday, June 5, 2026
Homeಕರಾವಳಿಬಂಟ್ವಾಳ: ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನ ಶಂಭುಗ ಬಾಲಮಂಟಮೆಯಲ್ಲಿ ನಡೆಯುವ ನವರಾತ್ರಿ ನೇಮಗಳಿಗೆ ಗೂನೆ ಮುಹೂರ್ತ

ಬಂಟ್ವಾಳ: ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನ ಶಂಭುಗ ಬಾಲಮಂಟಮೆಯಲ್ಲಿ ನಡೆಯುವ ನವರಾತ್ರಿ ನೇಮಗಳಿಗೆ ಗೂನೆ ಮುಹೂರ್ತ

- Advertisement -
- Advertisement -

ಬಂಟ್ವಾಳ: ಶ್ರೀ ಗುಡ್ಡೆ ಚಾಮುಂಡಿ ದೈವಸ್ಥಾನ ಶಂಭುಗ ಬಾಲಮಂಟಮೆಯಲ್ಲಿ  ಅ. 3 ರಂದು ನಡೆಯುವ ದೈವಗಳ ನವರಾತ್ರಿ ನೇಮಗಳಿಗೆ ಇಂದು ಗೂನೆಮುಹೂರ್ತ ನಡೆಯಿತು. ಅರಸು ಗುಡ್ಡೆಚಾಮುಂಡಿ, ಪ್ರಧಾನಿಶ್ರೀ ಪಂಜುರ್ಲಿ, ಬಂಟೆದಿ ಶ್ರೀಮಲೆಕೊರತಿ ದೈವಗಳಿಗೆ ಅ.3 ರಂದು ಕಟ್ಟುಕಟ್ಟಲೆಯಂತೆ ನವರಾತ್ರಿ ನೇಮ ನಡೆಯಲಿದೆ.

ಅದೇ ದಿನ ಸಂಜೆ ಮಾಣಿ ಗುತ್ತುವಿನಿಂದ ದೈವಗಳ ಭಂಡಾರ ಹೊರಟು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ನಿಯಮದಂತೆ ನೇಮ ನಡೆಯುತ್ತದೆ. ಅದೇ ದಿನ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಣಿ ಗುತ್ತು ಸಚಿನ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!