Thursday, June 4, 2026
Homeತಾಜಾ ಸುದ್ದಿಮೈಸೂರಿನಲ್ಲೇ ತಯಾರಿಸಿದ ಮೈಸೂರು ರೇಷ್ಮೆ ಸೀರೆ ಧರಿಸಿ ದಸರಾ ಉದ್ಘಾಟಿಸಿದ ರಾಷ್ಟ್ರಪತಿ: ಈ ಸೀರೆಯ ಬೆಲೆ...

ಮೈಸೂರಿನಲ್ಲೇ ತಯಾರಿಸಿದ ಮೈಸೂರು ರೇಷ್ಮೆ ಸೀರೆ ಧರಿಸಿ ದಸರಾ ಉದ್ಘಾಟಿಸಿದ ರಾಷ್ಟ್ರಪತಿ: ಈ ಸೀರೆಯ ಬೆಲೆ ಎಷ್ಟು ಗೊತ್ತಾ?

- Advertisement -
- Advertisement -

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ನಾಡಹಬ್ಬ ದಸರಾ ಉದ್ಘಾಟನೆ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮೈಸೂರಿನಲ್ಲೇ ತಯಾರಿಸಿದ ಮೈಸೂರು ರೇಷ್ಮೆ ಸೀರೆಯನ್ನು ಧರಿಸಿ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಮೈಸೂರು ರೇಷ್ಮೆ ಸೀರೆಯನ್ನು ಮೈಸೂರು ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗಿದ್ದು, ಕಳೆದ ವಾರ ದೆಹಲಿಯಲ್ಲಿ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದ ವೇಳೆ ಉಡುಗೊರೆಯಾಗಿ ನೀಡಲಾಗಿತ್ತು. ರಾಷ್ಟ್ರಪತಿಗಳು ಇಂದು ಧರಿಸಿದ್ದ ಸೀರೆ 70 ಸಾವಿರ ರೂಪಾಯಿ ಬೆಲೆ ಬಾಳುತ್ತದೆ.

ಮೈಸೂರು ಜಿಲ್ಲಾಡಳಿತದ ವತಿಯಿಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗಿತ್ತು.

- Advertisement -

Latest News

error: Content is protected !!