Thursday, June 4, 2026
Homeತಾಜಾ ಸುದ್ದಿಧರ್ಮಸ್ಥಳ: ಉಗ್ರಚಟುವಟಿಕೆಗಳಿಗೆ ಶೀಘ್ರವೇ ಅಂತ್ಯ ಹಾಡಬೇಕು: ಪೇಜಾವರ ಶ್ರೀ

ಧರ್ಮಸ್ಥಳ: ಉಗ್ರಚಟುವಟಿಕೆಗಳಿಗೆ ಶೀಘ್ರವೇ ಅಂತ್ಯ ಹಾಡಬೇಕು: ಪೇಜಾವರ ಶ್ರೀ

- Advertisement -
- Advertisement -

ಧರ್ಮಸ್ಥಳ: ಶಿವಮೊಗ್ಗ ಹಾಗೂ ಕರಾವಳಿ ಭಾಗದಲ್ಲಿ ಉಗ್ರರ ಸಂಚು ಪತ್ತೆಯಾಗಿದೆ. ಇದನ್ನು ಈ ಮೊದಲೇ ಮಟ್ಟ ಹಾಕಬೇಕಿತ್ತು. ಕೇಂದ್ರ, ರಾಜ್ಯ ಸರಕಾರಗಳು ಈಗಾಗಲೇ ಬಂಧಿಸಿದವರನ್ನು ತೀವ್ರ ವಿಚಾರಣೆ ನಡೆಸಿ, ಇದರ ಮೂಲವನ್ನು ಬೇರು ಸಹಿತ ಕಿತ್ತೊಗೆಯಬೇಕು ಎಂದು ಪೇಜಾವರ ಶ್ರೀಗಳು ಹೇಳಿದ್ರು.

ಧರ್ಮಸ್ಥಳದಲ್ಲಿ ಮಾತನಾಡಿದ ಶ್ರೀಗಳು, ಕೆಲವು ವಿಚಾರಗಳಿಗೆ ಕೋಮು ಬಣ್ಣ ಹಚ್ಚುವ ಷಡ್ಯಂತ್ರ ನಡೆಯುತ್ತಿದ್ದು, ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ದೇಶದಲ್ಲಿ ಸದಾ ಶಾಂತಿ ಸುವ್ಯವಸ್ಥೆ ಇರಬೇಕು ಎಂಬುದೇ ನಮ್ಮ ಆಶಯವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಉಗ್ರಚಟುವಟಿಕೆಗಳಿಗೆ ಅಂತ್ಯ ಹಾಡಬೇಕು ಎಂದು ಅವರು ಆಗ್ರಹಿಸಿದರು.

- Advertisement -

Latest News

error: Content is protected !!