Saturday, June 6, 2026
Homeತಾಜಾ ಸುದ್ದಿವಿಧಾನಸಭೆಯಲ್ಲಿ ಇಂದು 40% ಕಮಿಷನ್ ಆರೋಪ ಚರ್ಚೆ

ವಿಧಾನಸಭೆಯಲ್ಲಿ ಇಂದು 40% ಕಮಿಷನ್ ಆರೋಪ ಚರ್ಚೆ

- Advertisement -
- Advertisement -

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ರಾಜ್ಯ ಸರ್ಕಾರದ ವಿರುದ್ಧದ‌ 40% ಕಮಿಷನ್ ಆರೋಪ ವಿಚಾರ ಚರ್ಚೆಯಾಗಲಿದೆ.

ನಿಯಮ 69ರ ಅಡಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ನಿಲುವಳಿ ಸೂಚನಾ ಪ್ರಸ್ತಾವವನ್ನು ಅಂಗೀಕರಿಸಿರುವ ಸ್ಪೀಕರ್ ಇಂದು ಚರ್ಚೆಗೆ ಅವಕಾಶ ಕಲ್ಪಿಸಿದ್ದಾರೆ.

ಪ್ರಶ್ನೋತ್ತರ ಕಲಾಪದ ಬಳಿಕ ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಸದನದಲ್ಲಿ ತೀವ್ರ ಕೋಲಾಹಲ ಏರ್ಪಡುವ ನಿರೀಕ್ಷೆ ಇದೆ.

ನಿನ್ನೆಯಷ್ಟೇ ಬೆಂಗಳೂರು ನಗರದಲ್ಲಿ ಪೇ ಸಿಎಂ ಎಂಬ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಈಡು ಮಾಡುವಲ್ಲಿ ಯಶಸ್ವಿಯಾಗಿತ್ತು.

ಹೀಗಾಗಿ ಇಂದು ಸದನದಲ್ಲಿ ಚರ್ಚೆ ನಡೆಯುವ ವೇಳೆ ಅಡಳಿತ ಮತ್ತು ವಿಪಕ್ಷದ ನಡುವೆ ಗದ್ದಲ ಏರ್ಪಡಲಿದೆ.

- Advertisement -

Latest News

error: Content is protected !!