Wednesday, June 3, 2026
Homeಕರಾವಳಿಪುತ್ತೂರು: ನ್ಯಾಯಾಲಯಕ್ಕೆ ಹಾಜರಾಗದೆ ನಿರತರವಾಗಿ‌ ತಪ್ಪಿಸಿಕೊಂಡ ಆರೋಪಿಗಳು: ಜಾಮೀನು ನೀಡಿದ ವ್ಯಕ್ತಿಯನ್ನೇ ಬಂಧಿಸಿದ ಪೊಲೀಸರು

ಪುತ್ತೂರು: ನ್ಯಾಯಾಲಯಕ್ಕೆ ಹಾಜರಾಗದೆ ನಿರತರವಾಗಿ‌ ತಪ್ಪಿಸಿಕೊಂಡ ಆರೋಪಿಗಳು: ಜಾಮೀನು ನೀಡಿದ ವ್ಯಕ್ತಿಯನ್ನೇ ಬಂಧಿಸಿದ ಪೊಲೀಸರು

- Advertisement -
- Advertisement -

ಪುತ್ತೂರು: ನ್ಯಾಯಾಲಯಕ್ಕೆ ಹಾಜರಾಗದೆ ಪದೇ ಪದೇ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದ ಹಿನ್ನೆಲೆ ಕೊನೆಗೆ ಪೊಲೀಸರು ಜಾಮೀನು ನೀಡಿದ‌ ವ್ಯಕ್ತಿಯನ್ನೇ ಬಂಧಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬೇರೆ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗದೆ ಸುಮಾರು 1 ಲಕ್ಷ ರೂಪಾಯಿ ದಂಡ ಕೂಡ ಪಾವತಿ ಮಾಡದೆ ಇದ್ದ ಆರೋಪಿಗಳಿಗೆ ಪದೇ ಪದೇ ಜಾಮೀನು ನೀಡುತ್ತಿದ್ದ ಮುಂಡೂರು ಬೊಳ್ಳುಗುಡ್ಡೆ ನಿವಾಸಿ ಆಲಿಕುಂಞ( 55) ಅವರನ್ನು ಪುತ್ತೂರು‌ ಪೊಲೀಸರು  ಪುತ್ತೂರು ಬಸ್ ನಿಲ್ದಾಣದಲ್ಲಿ ನಿನ್ನೆ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ವ್ಯಕ್ತಿಗೆ ನ್ಯಾಯಾಂಗ ಬಂಧನ ವಿಧಿಸಿದೆ‌.  ಎಸ್. ಐ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ಹೆಡ್ ಕಾನ್ ಸ್ಟೇಬಲ್ ಪರಮೇಶ್ವರ, ರಾಧಾಕೃಷ್ಣ ಅವರು ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!