Monday, June 15, 2026
Homeಕರಾವಳಿಪುತ್ತೂರು: ಬನ್ನೂರಿನಲ್ಲಿ ಚಹಾ ಹಾಗೂ ಸಿಹಿತಿಂಡಿ ಹಂಚಿ ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಣೆ

ಪುತ್ತೂರು: ಬನ್ನೂರಿನಲ್ಲಿ ಚಹಾ ಹಾಗೂ ಸಿಹಿತಿಂಡಿ ಹಂಚಿ ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಣೆ

- Advertisement -
- Advertisement -

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬನ್ನೂರು ಗ್ರಾಮದ ಪ್ರಭು ಹೊಟೇಲ್ ಬಳಿಯಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು.

ಬನ್ನೂರು ಬಿಜೆಪಿ ಶಕ್ತಿಕೇಂದ್ರ ಮತ್ತು ಮೋದಿ ಅಭಿಮಾನಿಗಳಿಂದ ಚಹಾ ಮತ್ತು ಸಿಹಿ ತಿಂಡಿ ವಿತರಿಸಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಆಚರಣೆ ಮಾಡಿ ಸಾರ್ವಜನಿಕರಿಗೆ ಚಹಾ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಅಪ್ಪಯ್ಯ ಮಣಿಯಾಣಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಣ ಗೌಡ, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯ, ಉಪಾಧ್ಯಕ್ಷೆ ಗೀತಾ ಕೊಡಂಗೆ, ಬಿಜೆಪಿ ಬನ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ರಮಣಿ ಡಿ. ಗಾಣಿಗ, ಪುತ್ತೂರು ಬಿಜೆಪಿ ಮಂಡಲ ಕಾರ್ಯಕಾರಿಣಿ ಸಮಿತಿ ಸದಸ್ಯ ರತ್ನಾಕರ ಪ್ರಭು ಕಂಜೂರು, ಬನ್ನೂರು ಬಿಜೆಪಿ ಬೂತ್ ಸಮಿತಿ ಅದ್ಯಕ್ಷ ರಮೇಶ್ ಉಪಸ್ಥಿತರಿದ್ದರು.

ಅಲ್ಲದೇ ಅಟೋ ಚಾಲಕರು, ಗ್ರಾಮಸ್ಥರು, ಮೋದಿ ಅಭಿಮಾನಿಗಳು, ಬನ್ನೂರು ಚಿಕ್ಕಮೂಡ್ನೂರು ಪಡ್ನೂರು ಬಿಜೆಪಿ ಬೂತ್ ಸಮಿತಿಯ ಪದಾಧಿಕಾರಿಗಳು ಸದಸ್ಯರು ಕೂಡಾ ಭಾಗಿಯಾಗಿದ್ದರು.

- Advertisement -

Latest News

error: Content is protected !!