- Advertisement -
- Advertisement -
ಮುಂಬೈ;ಶಾಲೆಯ ಲಿಫ್ಟ್ ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿಯೊಬ್ಬರು ದುರಂತ ಸಾವನ್ನಪ್ಪಿರುವ ಘಟನೆ ಉತ್ತರ ಮುಂಬೈನ ಉಪನಗರ ಮಲಾಡ್ ನ ಚಿಂಚೋಳಿ ಬಂದರ್ ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ನಡೆದಿದೆ. ಜೆನೆಲ್ ಫರ್ನಾಂಡಿಸ್ ಮೃತ ಶಿಕ್ಷಕಿ.
ಜೆನೆಲ್ ಫರ್ನಾಂಡಿಸ್ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ಹೋಗಲು ಆರನೇ ಮಹಡಿಯಲ್ಲಿ ಕಾಯುತ್ತಿದ್ದರು. ಲಿಫ್ಟ್ ಏರುತ್ತಿದ್ದಂತೆ ಬಾಗಿಲು ಮುಚ್ಚದ ಕಾರಣ, ಅವರ ಬ್ಯಾಗ್ ಸಿಕ್ಕಿ ಹಾಕಿಕೊಂಡಿತು, ಇದರಿಂದ ಆಕೆ ತಲೆ ಕೂಡ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಶಾಲಾ ಸಿಬ್ಬಂದಿ ಅವರ ಸಹಾಯಕ್ಕೆ ಧಾವಿಸಿ ಬಳಿಕ ವರನ್ನು ಹೊರಗೆಳೆದು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ,
- Advertisement -