Friday, June 5, 2026
Homeತಾಜಾ ಸುದ್ದಿರಾಣಿ ಎಲಿಜಬೆತ್ II ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

ರಾಣಿ ಎಲಿಜಬೆತ್ II ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

- Advertisement -
- Advertisement -

ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 19 ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯ ಸಮಾರಂಭ ನಡೆಯಲಿದ್ದು, ಹಾಜರಿರುವ ವಿಶ್ವ ನಾಯಕರಿಗೆ ಸಮಾರಂಭದಲ್ಲಿ ನಡೆಯುವ ಕೆಲವು ಕಟ್ಟುನಿಟ್ಟಾದ ಪ್ರೋಟೋಕಾಲ್‌ನ ಬಗ್ಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.

ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆಯುವ ಸಮಾರಂಭಕ್ಕೆ ಅಸಂಖ್ಯಾತ ಜನ ಸೇರುವ ಕಾರಣದಿಂದಾಗಿ ಪ್ರತಿ ದೇಶದಿಂದ ಹಿರಿಯ ಪ್ರತಿನಿಧಿಗಳು ಮತ್ತು ಅವರ ಸಂಗಾತಿಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಶನಿವಾರ ತಡರಾತ್ರಿ ಸಾಗರೋತ್ತರ ರಾಯಭಾರ ಕಚೇರಿಗಳು ಮತ್ತು ಉನ್ನತ ಆಯೋಗಗಳಿಗೆ ಕಳುಹಿಸಲಾದ ದಾಖಲೆಯಲ್ಲಿ, ಎಫ್‌ಸಿಡಿಒ “ರಾಜ್ಯ ಅಂತ್ಯಕ್ರಿಯೆಯ ಸೇವೆ ಮತ್ತು ಸಂಬಂಧಿತ ಕಾರ್ಯಕ್ರಮಗಳಲ್ಲಿ ಸೀಮಿತ ಸ್ಥಳಾವಕಾಶದ ಕಾರಣ, ಪ್ರಮುಖ ಅತಿಥಿಯ ಕುಟುಂಬದ ಇತರ ಸದಸ್ಯರು, ಸಿಬ್ಬಂದಿಗೆ ಅವಕಾಶವಿರುವುದಿಲ್ಲ” ಎಂದು ತಿಳಿಸಿದೆ.

- Advertisement -

Latest News

error: Content is protected !!