Thursday, June 4, 2026
Homeಉತ್ತರ ಕನ್ನಡಕರಾವಳಿ ಕಾವಲು ಪಡೆಯ ಪಶ್ಚಿಮ ವಲಯ ಕಮಾಂಡರ್ ಆಗಿ ಮನೋಜ್ ಬಾಡ್ಕರ್

ಕರಾವಳಿ ಕಾವಲು ಪಡೆಯ ಪಶ್ಚಿಮ ವಲಯ ಕಮಾಂಡರ್ ಆಗಿ ಮನೋಜ್ ಬಾಡ್ಕರ್

- Advertisement -
- Advertisement -

ಕಾರವಾರ: ಕರಾವಳಿ ಕಾವಲು ಪಡೆಯ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ಕಾರವಾರ ಮೂಲದ ಮನೋಜ್ ವಸಂತ ಬಾಡ್ಕರ್ ನೇಮಕಗೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸೆರೆಮೊನಿಯಲ್ ಪರೇಡ್‌ನಲ್ಲಿ ಕಮಾಂಡರ್ ಆಗಿ ಮನೋಜ್ ಅಧಿಕಾರ ಸ್ವೀಕರಿಸಿದ್ದಾರೆ.

ಮನೋಜ್‌ ಬಾಡ್ಕರ್ ಅವರಿಗೆ ಮಹಾರಾಷ್ಟ್ರ, ಗೋವಾ, ಕೇರಳ, ಲಕ್ಷದ್ವೀಪ, ಕರ್ನಾಟಕದ ಮುಖ್ಯಸ್ಥರಾಗಿ ಜವಾಬ್ದಾರಿ ನೀಡಲಾಗಿದೆ. 2006 ರಿಂದ 2008 ರವರೆಗೆ ಮನೋಜ್ ಕರ್ನಾಟಕ ಮತ್ತು ಗೋವಾ ರಾಜ್ಯಕ್ಕೆ ಕೋಸ್ಟ್ ಗಾಡ್೯ ಮುಖ್ಯಸ್ಥರಾಗಿದ್ದರು.

ಕಾರವಾರ ಸೇಂಟ್ ಜೋಸೆಫ್ ಪ್ರೌಢಶಾಲೆ ಮತ್ತು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿಧ್ಯಾರ್ಥಿಯಾಗಿರುವ ಮನೋಜ್ ಬಾಡ್ಕರ್, 36 ವರ್ಷಗಳಿಂದ ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

Latest News

error: Content is protected !!