Wednesday, June 3, 2026
Homeಕರಾವಳಿಉಡುಪಿಉಡುಪಿ: ಇಸ್ಪೀಟು, ಮಟ್ಕಾ ಅಡ್ಡೆಗೆ ದಾಳಿ: 8 ಮಂದಿ ಪೊಲೀಸರ ವಶಕ್ಕೆ

ಉಡುಪಿ: ಇಸ್ಪೀಟು, ಮಟ್ಕಾ ಅಡ್ಡೆಗೆ ದಾಳಿ: 8 ಮಂದಿ ಪೊಲೀಸರ ವಶಕ್ಕೆ

- Advertisement -
- Advertisement -

ಉಡುಪಿ: ಜಿಲ್ಲೆಯ ಕಾಪು ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಟ್ಕಾ ಹಾಗೂ ಇಸ್ಪೀಟು ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಟ್ಕಾ ಜುಗಾರಿ ಅಡ್ಡೆ ಮೇಲೆ ದಾಳಿ ನಡೆಸಿದ ಕಾಪು ಪೊಲೀಸರು, ಏಣಗುಡ್ಡೆ ಗ್ರಾಮದ ಬೇಕರಿಯೊಂದರ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಮೊಹಮ್ಮದ್ ಆಸಿಫ್ ಎಂಬಾತನನ್ನು ಹಾಗೂ ಮೂಡಬೆಟ್ಟು ಗ್ರಾಮದ ನವರಂಗ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜನಾರ್ಧನ ಎಂಬುವನನ್ನು ವಶಕ್ಕೆ ಪಡೆದಿದ್ದಾರೆ.

ಮತ್ತೊಂದೆಡೆ ಕುಂದಾಪುರ ಬನ್ನೂರು ಗ್ರಾಮದ ಬಾರ್ ವೊಂದರ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ನವೀನ, ಸಚಿನ್, ಶ್ರೀನಾಥ, ವಸಂತ್, ಶ್ರೀಧರ, ಸುಕೇಶ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!