Wednesday, June 3, 2026
Homeಕೊಡಗುಭಾಗಮಂಡಲದಲ್ಲಿ ಹಶೀಶ್ ಆಯಿಲ್ ಮಾರಾಟ ಜಾಲ ಪತ್ತೆ: ಕೇರಳ ಮೂಲದ ಮೂವರು ಆರೋಪಿಗಳು ಅರೆಸ್ಟ್

ಭಾಗಮಂಡಲದಲ್ಲಿ ಹಶೀಶ್ ಆಯಿಲ್ ಮಾರಾಟ ಜಾಲ ಪತ್ತೆ: ಕೇರಳ ಮೂಲದ ಮೂವರು ಆರೋಪಿಗಳು ಅರೆಸ್ಟ್

- Advertisement -
- Advertisement -

ಭಾಗಮಂಡಲ: ಕೊಡಗು ಜಿಲ್ಲೆಯಲ್ಲಿ ಹಶೀಶ್ ಆಯಿಲ್ ಮಾರಾಟ ಜಾಲ ಬಯಲಿಗೆ ಬಂದಿದೆ.

ಕೇರಳ ಮೂಲದ ಮೂವರು ಆರೋಪಿಗಳ‌ನ್ನು ಬಂಧಿಸಲಾಗಿದ್ದು, 10 ಲಕ್ಷ ರೂಪಾಯಿ ಮೌಲ್ಯದ 1.116 ಗ್ರಾಂ ಹಶೀಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.

ಭಾಗಮಂಡಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಭಾಗಮಂಡಲ‌ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಿನ ತಪಾಸಣೆ ನಡೆಸಿದಾಗ ಮಾರಾಟ ಜಾಲ ಬಯಲಾಗಿದೆ.

ತಪಾಸಣೆಯ ಸಂದರ್ಭದಲ್ಲಿ ಕಾರಿನಲ್ಲಿ ವಿವಿಧ ನಂಬರ್ ಪ್ಲೇಟ್ ಗಳು ಪತ್ತೆಯಾಗಿದ್ದು,‌ ಕಾರಿನ ಢಿಕ್ಕಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಶೀಶ್ ಆಯಿಲ್ ದೊರೆತಿದೆ.

ಅಹ್ಮದ‌್ ಕಬೀರ್ (37), ಅಬ್ದುಲ್ ಖಾದರ್ (27) ಮತ್ತು ಮಹಮ್ಮದ್ ಮುಜಾಬಿಲ್ (22) ಬಂಧನಕ್ಕೊಳಪಟ್ಟ ಆರೋಪಿಗಳಾಗಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!