Saturday, June 6, 2026
Homeತಾಜಾ ಸುದ್ದಿಮುಲ್ಕಿ: ಆ.28ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್‌ ಬೈಕ್‌ ಜಾಥಾ: ಮಿಥುನ್ ರೈ

ಮುಲ್ಕಿ: ಆ.28ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬೃಹತ್‌ ಬೈಕ್‌ ಜಾಥಾ: ಮಿಥುನ್ ರೈ

- Advertisement -
- Advertisement -

ಮುಲ್ಕಿ: ಸ್ವಾತಂತ್ರ್ಯ ಅಮೃತೋತ್ಸವದ ಪ್ರಯುಕ್ತ ಆ.28ರಂದು ಮೂಡುಬಿದಿರೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾರ್ಗದರ್ಶನದಲ್ಲಿ ಬೃಹತ್ ಬೈಕ್ ಜಾಥಾ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.

ಹಳೆಯಂಗಡಿಯಲ್ಲಿ ನಡೆದ ಸಂಘಟನಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯ ಅಲಂಕಾರ ದೇವಸ್ಥಾನದಿಂದ ಹೊರಡುವ ಈ ಜಾಥಾ ಮುಲ್ಕಿ ಬಪ್ಪನಾಡು ಕ್ಷೇತ್ರದಲ್ಲಿ ಸಮಾಪ್ತಿಗೊಳ್ಳಲಿದೆ. ಪ್ರತೀ ಬೈಕ್ ನಲ್ಲೂ ರಾಷ್ಟ್ರಧ್ವಜ ರಾರಾಜಿಸಲಿದ್ದು, ಗಳಿಸಿದ ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಸಂದೇಶವನ್ನು ಈ ಜಾಥಾದ ಮೂಲಕ ಸಮಾಜಕ್ಕೆ ನೀಡಲಾಗುವುದು ಎಂದು ತಿಳಿಸಿದ್ರು..

- Advertisement -

Latest News

error: Content is protected !!