Saturday, June 13, 2026
Homeತಾಜಾ ಸುದ್ದಿಜೈಲು‌ ಹೇಗಿದೆ ಅಂತಾ‌ ನೋಡಲು 13 ವರ್ಷದ ಬಾಲಕನನ್ನು‌ ಕೊಲೆ ಮಾಡಿದ 16 ವರ್ಷದ ಹುಡುಗ

ಜೈಲು‌ ಹೇಗಿದೆ ಅಂತಾ‌ ನೋಡಲು 13 ವರ್ಷದ ಬಾಲಕನನ್ನು‌ ಕೊಲೆ ಮಾಡಿದ 16 ವರ್ಷದ ಹುಡುಗ

- Advertisement -
- Advertisement -

ಉತ್ತರಪ್ರದೇಶ: ಜೈಲು‌ ಹೇಗಿದೆ ಅಂತಾ‌ ನೋಡಲು 13 ವರ್ಷದ ಬಾಲಕನನ್ನು‌ 16 ವರ್ಷದ ಹುಡುಗ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಜೈಲು ಹೇಗಿದೆ ಎಂದು ನೋಡಲು, ಜೈಲು ಆರಾಮವಾಗಿ ಇರಬಹುದೆಂದು ಭಾವಿಸಿ ಈ ಬಾಲಕ ಸುಮಾರು ಕಳೆದ ಐದು ತಿಂಗಳಿನಿಂದ ಕೊಲೆ ಮಾಡಿ ಜೈಲಿಗೆ ಹೋಗುವ ಯೋಜನೆ ಹಾಕಿದ್ದ.

ನಿನ್ನೆ ಈತ ತನ್ನ 13 ವರ್ಷದ ಸ್ನೇಹಿತನನ್ನು ಕಾರು ನೋಡುವ ನೆಪದಲ್ಲಿ ಕರೆದುಕೊಂಡು ದೆಹಲಿ ಮೀರತ್ ಎಕ್ಸ್‌ಪ್ರೆಸ್‌ ವೇಯ ಕೆಳಗೆ ಕರೆದುಕೊಂಡು ಬಂದಿದ್ದಾನೆ.ಅಲ್ಲಿ ಆತ ಗಾಜಿನ ತುಂಡಿನಲ್ಲಿ ಸ್ನೇಹಿತನ ಕುತ್ತಿಗೆಯನ್ನು ಸೀಳಿದ್ದಾನೆ.

ನಂತರ ಆತ ಬಾಲಕನ ದೇಹವನ್ನು ಎಳೆದುಕೊಂಡು ಹೋಗಿ ದೆಹಲಿ ಮೀರತ್ ಎಕ್ಸ್‌ಪ್ರೆಸ್‌ ವೇಯ ಸಮೀಪದ ಪೊದೆಯಲ್ಲಿ ಎಸೆದಿದ್ದಾನೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕನಿಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!