- Advertisement -
![]()
- Advertisement -
ಕಾರ್ಕಳ: ಹಲವು ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಖತರ್ನಾಕ್ ಕಳ್ಳರಿಬ್ಬರನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷರ ಹಾಗೂ ವೃತ ನಿರೀಕ್ಷಕರ ತಂಡ ಬಂಧಿಸಿದೆ.
ಬಂಧಿತರ ಮೇಲೆ ರಾಜ್ಯಾದ್ಯಂತ ಬಹಳಷ್ಟು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬಜಪೆ ನಿವಾಸಿ ಇದೀಗ ಮೂಳೂರುಎಸ್.ಎಸ್. ರಸ್ತೆಯ ಶ್ರೀ ಸಾಯಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ವಾಜೀದ್ ಜೆ.(25) ಹಾಗೂ ಉಡುಪಿ ಕಡಿಯಾಳಿ ಆಚಾರ್ಯ ರಸ್ತೆಯ ಬಾಡಿಗೆ ಮನೆ ನಿವಾಸಿ ಶಹನಾಜ್ (32) ಬಂಧಿತರು.
ಆರೋಪಿಗಳು ಬಹಳಷ್ಟು ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ನಡೆಸಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗುತ್ತಿದ್ದರು. ಇದೀಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
- Advertisement -


