Thursday, June 4, 2026
Homeಕರಾವಳಿಉಡುಪಿಪರ್ಕಳ: ಚಿರತೆ ದಾಳಿ ಪ್ರಕರಣ: ಸತ್ತಂತೆ ನಟಿಸಿ ಪ್ರಾಣಾಪಾಯದಿಂದ ಪಾರಾದ ಶ್ವಾನ

ಪರ್ಕಳ: ಚಿರತೆ ದಾಳಿ ಪ್ರಕರಣ: ಸತ್ತಂತೆ ನಟಿಸಿ ಪ್ರಾಣಾಪಾಯದಿಂದ ಪಾರಾದ ಶ್ವಾನ

- Advertisement -
- Advertisement -

ಮಣಿಪಾಲ: ಎರಡು ದಿನಗಳ ಹಿಂದೆ ಪರ್ಕಳದ ಹೆರ್ಗ ಬಳಿಯ ಗೋಳಿಕಟ್ಟೆಯ ಬಾಲಚಂದ್ರ ಕೆದ್ಲಾಯರವರ ಮನೆ ಅಂಗಳದಲ್ಲಿ ಕಟ್ಟಿದ್ದ ನಾಯಿಗೆ ಚಿರತೆ ಹೊಂಚು ಹಾಕಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಆದರೆ ನಾಯಿ ಚಿರತೆಯ ಬೇಟಿಗೆ ಬಲಿಯಾಗದೆ ಬದುಕುಳಿದಿದೆ. ಚಿರತೆ ದಾಳಿ ಮಾಡಲು ಯತ್ನಿಸಿದಾಗ ನಾಯಿ ಜೋರಾಗಿ ಬೊಗಳಿ ಸತ್ತಂತೆ ನಟಿಸಿದೆ. ಈ ಸಂದರ್ಭ ಮನೆಯವರಿಗೆ ಎಚ್ಚರವಾಗಿ ಟಾರ್ಚ್ ಹಾಕಿ ಹೊರಬಂದಾಗ ಚಿರತೆ ಅಲ್ಲಿಂದ ಓಡಿದೆ.  ಸದ್ಯಕ್ಕೆ ನಾಯಿಗೆ ಮನೆಯ ಒಳಗೆ ಆರೈಕೆ ಮಾಡಲಾಗ್ತಿದೆ.

- Advertisement -

Latest News

error: Content is protected !!