Wednesday, June 3, 2026
Homeತಾಜಾ ಸುದ್ದಿಖ್ಯಾತ ಹಿನ್ನೆಲೆ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಖ್ಯಾತ ಹಿನ್ನೆಲೆ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

- Advertisement -
- Advertisement -

ಬೆಂಗಳೂರು: ಹೆಸರಾಂತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನರಾಗಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಶಿವಮೊಗ್ಗ ಸುಬ್ಬಣ್ಣ ಇಹಲೋಕ ತ್ಯಜಿಸಿದ್ದಾರೆ.

ಗಾಯಕ ಸುಬ್ಬಣ್ಣ ಅವರಿಗೆ 83 ವರ್ಷ ವಯಸ್ಸಾಗಿತ್ತು.

1976 ರಲ್ಲಿ ತೆರೆ ಕಂಡ ಕಾಡು ಕುದುರೆ ಸಿನಿಮಾದ ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಹಿನ್ನೆಲೆ ಗಾಯಕ ಎಂಬ ಹೆಗ್ಗಳಿಕೆ ಸುಬ್ಬಣ್ಣ ಅವರ ಹೆಸರಿನಲ್ಲಿದೆ.

- Advertisement -

Latest News

error: Content is protected !!