Saturday, June 13, 2026
Homeಕೊಡಗುಮೈಸೂರು- ಮಾಣಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡದಲ್ಲಿ ಬಿರುಕು

ಮೈಸೂರು- ಮಾಣಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡದಲ್ಲಿ ಬಿರುಕು

- Advertisement -
- Advertisement -

ಕೊಡಗು: ಜಿಲ್ಲೆಯಲ್ಲಿ ಇಂದೂ ಕೂಡ ವರುಣನ ಆರ್ಭಟ ಮುಂದುವರೆದಿದ್ದು ಮೈಸೂರು -ಮಾಣಿ ರಸ್ತೆಯಲ್ಲಿ ಮದೆನಾಡು ಸಮೀಪ ಗುಡ್ಡದಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಇಲ್ಲಿ ರಸ್ತೆ ಬದಿಯಲ್ಲಿ ಉದ್ದಕ್ಕೂ ವಿದ್ಯುತ್ ಕಂಬಗಳಿದ್ದು, ಒಂದು ವೇಳೆ ಮಣ್ಣು ಕುಸಿದು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದರೆ ಭಾರಿ ಅನಾಹುತವೇ ಸಂಭವಿಸಲಿದೆ.

ಗಾಳಿಯ ಅಬ್ಬರಕ್ಕೆ ವಿದ್ಯುತ್ ಕಂಬಗಳು ಧರೆಗೆ ವೇಗವಾಗಿ ಬೀಸುತ್ತಿರುವ ಗಾಳಿಗೆ ಅನೇಕ ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿರಾಜಪೇಟೆಯ ಚಿಕ್ಕಪೇಟೆ ಸಮೀಪ ಹಲವು ವಿದ್ಯುತ್ ಕಂಬಗಳು ಉರುಳಿವೆ. ಮಳೆಗಿಂತ ಗಾಳಿಯ ಅಬ್ಬರವೇ ಅನೇಕ ಕಡೆ ಹೆಚ್ಚಾಗಿದೆ.

- Advertisement -

Latest News

error: Content is protected !!