Wednesday, June 3, 2026
Homeಕರಾವಳಿಮಂಗಳೂರು: ಉಳ್ಳಾಲದಲ್ಲಿ ತನ್ನ ಮೇಲೆ ಹಲ್ಲೆಗೆ ಯತ್ನವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ: ವ್ಯಕ್ತಿಯ...

ಮಂಗಳೂರು: ಉಳ್ಳಾಲದಲ್ಲಿ ತನ್ನ ಮೇಲೆ ಹಲ್ಲೆಗೆ ಯತ್ನವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು : ತನ್ನ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಿ ಆತಂಕ ಮೂಡಿಸಿದ್ದ ಉಳ್ಳಾಲದ ವ್ಯಕ್ತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದಾಗ ತನ್ನ ಮೇಲೆ ಮೂವರು ತಲವಾರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಕೆ.ಸಿ.ರೋಡ್ ನಿವಾಸಿ ಕಿಶೋರ್ (48) ಎಂಬುವರು ಹೇಳಿ ಆತಂಕ ಮೂಡಿಸಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿದಾಗ ಇಂತಹ ಯಾವುದೇ ಪ್ರಕರಣ ನಡೆಯದೇ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಿಶೋರ್ ವಿರುದ್ಧವೇ ಪ್ರಕರಣ ದಾಖಲಾಗಿದೆ,.

- Advertisement -

Latest News

error: Content is protected !!