Wednesday, June 3, 2026
Homeತಾಜಾ ಸುದ್ದಿಬಿಜೆಪಿಗೆ ಮಧ್ಯರಾತ್ರಿ ಪಾಪಪ್ರಜ್ಞೆ ಕಾಡಿದೆ: ಅದಕ್ಕೆ ಜನೋತ್ಸವ ರದ್ದು ಮಾಡಿದೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ...

ಬಿಜೆಪಿಗೆ ಮಧ್ಯರಾತ್ರಿ ಪಾಪಪ್ರಜ್ಞೆ ಕಾಡಿದೆ: ಅದಕ್ಕೆ ಜನೋತ್ಸವ ರದ್ದು ಮಾಡಿದೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ 

- Advertisement -
- Advertisement -

ಬೆಂಗಳೂರು: ಸಾವುಗಳನ್ನೇ ಸಾಧನೆ ಮಾಡಿಕೊಂಡು, ಅವುಗಳನ್ನು ರಾಜಕೀಯ ಅಧಿಕಾರ ಏಣಿ ಮಾಡಿಕೊಂಡಿದ್ದ ಬಿಜೆಪಿಗೆ ಮಧ್ಯರಾತ್ರಿ ಪಾಪಪ್ರಜ್ಞೆ ಕಾಡಿದೆ. ಹೀಗಾಗಿ ಜನೋತ್ಸವವನ್ನು ರಾತ್ರೋ ರಾತ್ರೋ ರದ್ದುಗೊಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆಗಿದೆ. ಎಲ್ಲೆಡೆ ಸೂತಕ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಸ್ವಪಕ್ಷದವನನ್ನು ಕಳೆದುಕೊಂಡ ಬಿಜೆಪಿ ವರ್ಷದ ಸಂಭ್ರಮಾಚರಣೆಗೆ ಮುಂದಾಗಿತ್ತು. ಜನೋತ್ಸವ ಬೇಡ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಆಗ ಅರ್ಥ ಮಾಡಿಕೊಳ್ಳದ ಬಿಜೆಪಿಗೆ ತಡರಾತ್ರಿ ಜ್ಞಾನೋದಯವಾಗಿದೆ. ಹೀಗಾಗಿ ಬಿಜೆಪಿಗೆ ತಟ್ಟುತ್ತಿದ್ದ ಸಂಭವನೀಯ ಮುಖಭಂಗ ತಪ್ಪಿದಂತಾಗಿದೆ. ಬಡ ಕಂಡವರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ಬಿಜೆಪಿಯ ‘ನರಹಂತಕ ರಾಜಕಾರಣ’ ನಿಲ್ಲಲಿ ಎಂದು ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಬಿಜೆಪಿ ಸಾಧನೆ ಬಗ್ಗೆ ವ್ಯಂಗ್ಯವಾಡಿದ್ದಾರೆ.



- Advertisement -

Latest News

error: Content is protected !!