Thursday, June 4, 2026
Homeಕರಾವಳಿಪ್ರವೀಣ್ ಹತ್ಯೆಗೆ ಹಿಂದೂ ಕಾರ್ಯಕರ್ತರ ಆಕ್ರೋಶ: ನಳೀನ್ ಕುಮಾರ್ ಕಟೀಲ್ ಕಾರ್ ಪಂಕ್ಚರ್ ಮಾಡಿದ ಹಿಂದೂ...

ಪ್ರವೀಣ್ ಹತ್ಯೆಗೆ ಹಿಂದೂ ಕಾರ್ಯಕರ್ತರ ಆಕ್ರೋಶ: ನಳೀನ್ ಕುಮಾರ್ ಕಟೀಲ್ ಕಾರ್ ಪಂಕ್ಚರ್ ಮಾಡಿದ ಹಿಂದೂ ಕಾರ್ಯಕರ್ತರು: ಪೊಲೀಸರಿಂದ ಲಾಠಿ ಚಾರ್ಜ್

- Advertisement -
- Advertisement -

ಸುಳ್ಯ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರದ ಮೆರವಣಿಗೆ ಬೆಳ್ಳಾರೆಯಿಂದ ನೆಟ್ಟಾರಿನ ಅವರ ನಿವಾಸಕ್ಕೆ ತೆರಳುತ್ತಿದ್ದ ವೇಳೆ‌ ಹಿಂದೂ‌ ಕಾರ್ಯಕರ್ತರು ಬಿಜೆಪಿಗೆ ಹಾಗೂ ಬಿಜೆಪಿ ನಾಯಕರಿಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರವೀಣ್ ನೆಟ್ಟಾರುರವರ ಅಂತಿಮ ದರ್ಶನಕ್ಕೆ ಬಂದ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ರವರ ಕಾರಿಗೆ ಹಿಂದೂ ಕಾರ್ಯಕರ್ತರು ತಡೆ ಒಡ್ಡಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಕಾರನ್ನು ಅಡ್ಡಗಟ್ಟಿ, ಪಂಕ್ಚರ್ ಮಾಡಿದ್ದಾರೆ‌ . ಬಳಿಕ‌ ಬೇರೆ ಕಾರಿನಲ್ಲಿ ನಳೀನ್ ತೆರಳಿದ್ದಾರೆ. ಪರಿಸ್ಥಿತಿ ಹತೋಟಿಗೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

- Advertisement -

Latest News

error: Content is protected !!